ಮೈಸೂರು: ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂಬ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿಕೆಗೆ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಈ ಕುರಿತು ಉತ್ತರ ಕೊಡಲಿ. ಆ ವ್ಯಕ್ತಿ ಹೆಸರು ಹೇಳುವುದಿಲ್ಲ. ಆ ಬಚ್ಚಲು ಬಗ್ಗೆ ಮಾತನಾಡಲು ಇಷ್ಟವಿಲ್ಲ’ ಎಂದು ಹೇಳಿದರು.

‘ಟಗರಿನ ತಲೆಯೇ ತೆಗೆಯೋಕೆ. ಟಿಪ್ಪು ಸುಲ್ತಾನರ ತಲೆಯನ್ನು ತೆಗೆದ ಉರಿಗೌಡ– ನಂಜಗೌಡ ಇತಿಹಾಸ ನನಗಂತೂ ಗೊತ್ತಿಲ್ಲ. ಬರೀ ನಾಟಕ. ಟಿಪ್ಪು ಸಾಧನೆಯನ್ನು ರಾಷ್ಟ್ರಪತಿಗಳೇ ಸದನದಲ್ಲಿ ಮಾತನಾಡಿದ್ದಾರೆ. ಆಗ ಬೊಮ್ಮಾಯಿ, ಯಡಿಯೂರಪ್ಪ ಎಲ್ಲ ಇದ್ದರು’ ಎಂದರು.

‘ಸುದೀಪ್ ನನ್ನ ಸ್ನೇಹಿತ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ರಾಜಕಾರಣದ ಕುರಿತು ಚರ್ಚೆ ಮಾಡಿದ್ದೇವೆ. ನನ್ನ 35 ವರ್ಷದ ಅನುಭವ ಹೇಳಿದ್ದೇನೆ. ಪಕ್ಷಕ್ಕೆ ಕರೆತರುವ ಬಗ್ಗೆ ನಾನೇನೂ ಮಾತನಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇವನ್ನೂ ಓದಿ...

ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು: ಸಚಿವ ಅಶ್ವತ್ಥ್ನಾರಾಯಣ ವಿಡಿಯೊ

ಟಿಪ್ಪು ವಿಚಾರವಾಗಿ ವಾಕ್ಸಮರ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಅಶ್ವತ್ಥ ನಾರಾಯಣ ಹೇಳಿಕೆ ಸರಿಯೇ? ಮೋದಿ, ಅಮಿತ್ ಶಾ ಉತ್ತರಿಸಲಿ: ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.