ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕೆಲವು ಹೊಸ ಕಾರ್ಯಕ್ರಮಗಳನ್ನು ಜೋಡಿಸಿದ ಜಿಲ್ಲಾಡಳಿತವು ಅದರಲ್ಲಿ ಯಶಸ್ಸಿನತ್ತ ಹೆಜ್ಜೆ ಇಟ್ಟಿತು.

ಅ.3ರಿಂದ 12ರವರೆಗೆ ಆಯೋಜಿಸಿದ್ದ ನಾಡಹಬ್ಬ ಬಹುತೇಕ ಯಶಸ್ಸು ಕಂಡಿತು. ಮೆರವಣಿಗೆಯಲ್ಲಿ ಅವ್ಯವಸ್ಥೆ ಹಾಗೂ ಸಂಬಂಧಿಸಿದ ಇಲಾಖೆಗಳ ಸಮನ್ವಯದ ಕೊರತೆ ಕಂಡುಬಂದಿದ್ದು ಬಿಟ್ಟರೆ ಇತರ ಎಲ್ಲ ಕಾರ್ಯಕ್ರಮಗಳಲ್ಲೂ ಶಿಸ್ತು ಕಂಡುಬಂದಿತು. ನಿರ್ವಿಘ್ನವಾಗಿ ನಡೆದ ಮಹೋತ್ಸವದಲ್ಲಿ ಸ್ಥಳೀಯರು, ರಾಜ್ಯದ ವಿವಿಧ ಜಿಲ್ಲೆಗಳವರೊಂದಿಗೆ ದೇಶ–ವಿದೇಶಗಳ ಪ್ರವಾಸಿಗರು ಪಾಲ್ಗೊಂಡು ಸಂಭ್ರಮಿಸಿದರು. ಹಲವು ಕಾರ್ಯಕ್ರಮಗಳು ಜನರಿಗೆ ರಂಜನೆ–ಮುದ ನೀಡಿದವು.

ಅರಮನೆ ಆವರಣದಲ್ಲಿ ಆರಂಭಗೊಳ್ಳುವ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ ವೀಕ್ಷಿಸಲು ಈ ಬಾರಿ ಹೆಚ್ಚಿನ ಮಂದಿಗೆ ಅವಕಾಶವಾಯಿತು.

ಹೆಚ್ಚಿನ ಮಂದಿಗೆ ಅವಕಾಶ: ಈ ಹಿಂದೆ, ಅಂಬಾರಿ ಆನೆ, ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು ಅರಮನೆ ಮುಂದಿನಿಂದಲೇ ಹೊರಡುತ್ತಿದ್ದವು. ಈ ವರ್ಷ ಅದನ್ನು ಬದಲಿಸಲಾಗಿತ್ತು. ಅಂಬಾರಿ ಕಟ್ಟುವ ಸ್ಥಳದಿಂದ ಅಭಿಮನ್ಯು ಸೇರಿದಂತೆ ಎಲ್ಲ ಆನೆಗಳು ನೇರವಾಗಿ ಅರಮನೆ ಆವರಣದ ತ್ರಿನೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಬಲಕ್ಕೆ ತಿರುಗಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಗಾಯತ್ರಿ ದೇವಾಲಯದಲ್ಲಿ ಮತ್ತೆ ಬಲಕ್ಕೆ ತಿರುಗಿ ಅರಮನೆ ಎದುರಿಗೆ ಬಂದವು. ಅಲ್ಲಿ ಮುಖ್ಯಮಂತ್ರಿ ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಿದ್ದರಿಂದಾಗಿ ಹೆಚ್ಚುವರಿಯಾಗಿ ಸಾವಿರಾರು ಮಂದಿಗೆ ಆಸನಗಳ ವ್ಯವಸ್ಥೆ ಮಾಡಲು ಸಾಧ್ಯವಾಯಿತು. ಇದು ಈ ಬಾರಿಯ ಹೊಸತು ಹಾಗೂ ವಿಶೇಷ.

ಹೊರವಲಯದಲ್ಲಿ ನಡೆದರೂ ಬಂದ ಜನ: ಜಂಬೂಸವಾರಿ ನಂತರ ಹೆಚ್ಚು ಜನರು ಸೇರುವ ಮತ್ತೊಂದು ಆಕರ್ಷಣೆಯ ಕಾರ್ಯಕ್ರಮವೆಂದರೆ ಅದು ಯುವ ದಸರಾ. ಯುವಜನರೊಂದಿಗೆ ಎಲ್ಲ ವಯೋಮಾನದವರೂ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದಿನ ವರ್ಷಗಳಲ್ಲಿ ಅದನ್ನು ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಆ ಸಂಪ್ರದಾಯವನ್ನು ಬಾರಿ ಮುರಿದ ಜಿಲ್ಲಾಡಳಿತ, ಹೊರವಲಯದ ಹಾಗೂ ಉತ್ತನಹಳ್ಳಿ ಸಮೀಪದ ವಿಶಾಲ ಜಾಗಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸಿತು. ಶ್ರೇಯಾ ಘೋಷಾಲ್, ಬಾದ್ಷಾ ಎ.ಆರ್.ರೆಹಮಾನ್, ಇಳಯರಾಜ ಮೊದಲಾದ ಖ್ಯಾತನಾಮರನ್ನು ಆಹ್ವಾನಿಸಿತು. ಇದರ ಪರಿಣಾಮ, ಸಹಸ್ರಾರು ಮಂದಿ ಪಾಲ್ಗೊಂಡು ಖುಷಿಪಟ್ಟರು. ಸುರಕ್ಷತೆ ಮೊದಲಾದ ವಿಷಯದಲ್ಲಿ ಕೇಳಿಬಂದಿದ್ದ ಆತಂಕ ಹಾಗೂ ಟ್ರಾಫಿಕ್ ನಿರ್ವಹಣೆಯ ಸವಾಲುಗಳ ನಡುವೆಯೇ ‘ಪ್ರಯೋಗ’ ಯಶಸ್ಸು ಕಂಡಿತು.

ಯುವ ದಸರೆಯಲ್ಲಿ ಇದೇ ಮೊದಲ ಬಾರಿಗೆ ‘ಟಿಕೆಟ್’ ಪರಿಚಯಿಸುವ ಕೆಲಸವನ್ನೂ ಜಿಲ್ಲಾಡಳಿತ ಮಾಡಿತು. ‘ಉಳ್ಳವರು’ ಹಣ ಕೊಟ್ಟು ಟಿಕೆಟ್ ಖರೀದಿಸಿ ಕಾರ್ಯಕ್ರಮ ವೀಕ್ಷಿಸಿದರೆ, ಸಾರ್ವಜನಿಕರಿಗೆ ಮುಕ್ತ ಪ್ರವೇಶವೂ ಇತ್ತು.

ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳು ಈ ಬಾರಿ ಜನರ ದಸರೆಯಾಗಿ ಅದ್ದೂರಿ ವಿಜೃಂಭಣೆಯಿಂದ ನಡೆದವು. ಮಾಧ್ಯಮದಿಂದ ದೊರೆತ ಹೆಚ್ಚಿನ ಪ್ರಚಾರ ಮೆರುಗು ನೀಡಿತು
ಜಿ.ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ

ದಸರೆಗೆ ಅತಿ ಹೆಚ್ಚು ಜನರ ಬಂದಿದ್ದಾರೆ: ಸಿಎಂ ಸಂತಸ

ಮೈಸೂರು: ‘ನಾಡಹಬ್ಬ ದಸರಾ ಮಹೋತ್ಸವಕ್ಕೆ ಈ ಬಾರಿ ಹೆಚ್ಚು ಜನ ಬಂದಿದ್ದಾರೆ. ಅದ್ದೂರಿಯಾಗಿ ನಡೆಸಿದ್ದು ಇದಕ್ಕೆ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ ‘ಉತ್ಸವದ ಆಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳೆಲ್ಲರೂ ಶ್ರಮಪಟ್ಟಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಜನರೆಲ್ಲರೂ ಖುಷಿಯಾಗಿ ಉತ್ಸವ ನೋಡಿದ್ದಾರೆ. ಮಳೆ–ಬೆಳೆ ಚೆನ್ನಾಗಿ ಆಗಿರುವುದರಿಂದ ಅದ್ದೂರಿಯಾಗಿ ಮಾಡುವಂತೆ ಸೂಚಿಸಿದ್ದೆ; ಅದರಂತೆ ಮಾಡಿದ್ದಾರೆ. ಜನರು ಖುಷಿಯಾಗಿದ್ದರೆ ಸರ್ಕಾರಕ್ಕೆ ಹಾಗೂ ನಮಗೆಲ್ಲರಿಗೂ ಖುಷಿಯೇ’ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್ಕುಮಾರ್ ಕೆಪಿಸಿಸಿ ವಕ್ತಾರ ಜಿ.ವಿ. ಸೀತಾರಾಮು ಇದ್ದರು.

Cut-off box - ಮೈಸೂರಿಗರಿಗೆ ಕಿರಿಕಿರಿ ನಡುವೆಯೂ... ‘ರಾಜ್ಯದ ಮೂಲೆ ಮೂಲೆಗಳಿಂದ ಅಕ್ಕಪಕ್ಕದ ರಾಜ್ಯಗಳಿಂದ ಮೈಸೂರಿಗೆ ಬಂದ ವಾಹನಗಳ ಪ್ರವಾಹ ನಿಭಾಯಿಸಲು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕಾಯಿತು. ಇದರಿಂದ ಮೈಸೂರಿನವರಿಗೆ ಸ್ವಲ್ಪಮಟ್ಟಿಗೆ ಕಿರಿಕಿರಿಯಾದರೂ ಪೊಲೀಸರ ವೃತ್ತಿಪರತೆ ಮೆಚ್ಚಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Cut-off box - ದೊರೆತ ವಿಶಾಲ ಜಾಗ... ಹಿಂದಿನ ವರ್ಷಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲಾಗುತ್ತಿದ್ದ ಆಹಾರ ಮೇಳವನ್ನು ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳವನ್ನು ನಡೆಸಲಾಯಿತು. ಇದರಿಂದ ಇವೆರಡು ಕಾರ್ಯಕ್ರಮಗಳಿಗೂ ವಿಶಾಲವಾದ ಜಾಗ ವಾಹನಗಳ ನಿಲುಗಡೆಗೆ ಸಮರ್ಪಕ ವ್ಯವಸ್ಥೆಯಾಯಿತು. ದಸರಾ ಹಾಗೂ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ನಡೆಸಿದ ಡ್ರೋನ್ ಶೋ ಕೂಡ ಜನರ ಮನಗೆದ್ದಿತು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ (ಸೆಸ್ಕ್) ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅ.6 7 11 ಹಾಗೂ 13ರಂದು ನಡೆಸಿದ ಪ್ರದರ್ಶನ ಅಭೂತಪೂರ್ವ ಯಶಸ್ಸಿನೊಂದಿಗೆ ಜನರ ಮೆಚ್ಚುಗೆಗೂ ಪಾತ್ರವಾಯಿತು. ₹3.50 ಕೋಟಿ ವೆಚ್ಚದಲ್ಲಿ 1500 ಡ್ರೋನ್ಗಳನ್ನು ಬಳಸಿ ಆಗಸದಲ್ಲಿ ಮೂಡಿಸಿದ ಚಿತ್ತಾರಗಳು ಜನರನ್ನು ಆಕರ್ಷಿಸಿದವು. ಇದು ಕೂಡ ಮಹೋತ್ಸವದ ಹಾಗೂ ಪಂಜಿನ ಕವಾಯತು ಪ್ರದರ್ಶನದ ಮೆರುಗು ಹೆಚ್ಚಿಸಿತು. ಪಂಜಿನ ಕವಾಯತು ಹಳತು ಮತ್ತು ಆಧುನಿಕತೆಯ ಮಿಶ್ರಣವಾಗಿದ್ದು ಈ ಬಾರಿಯ ವಿಶೇಷ. ಅತ್ಯಂತ ಪುರಾತನವಾದ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ಆಧುನಿಕವಾದ 1500 ಡ್ರೋನ್ಗಳು ರಚಿಸಿದ ಬೆಳಕಿನ ರಂಗೋಲಿ ನೆರೆದಿದ್ದವರನ್ನು ವಿಸ್ಮಯಗೊಳಿಸುವ ಜೊತೆಗೆ ರಂಜನೆಯನ್ನೂ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.