ಮೈಸೂರು: ‘ನಿಕ್ಷಯ್ ಪೋಷಣ್’ ಯೋಜನೆಯ ಅಡಿ ರಾಜ್ಯದ ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ₹500 ಹಣ ಬಿಡುಗಡೆಗೆ ಕ್ರಮ ಕೈಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಎಲ್ಲರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸದ್ಯ ಜಾರಿಯಲ್ಲಿರುವ ಖಜಾನೆ–2 ತಂತ್ರಾಂಶಕ್ಕೆ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆ ಕಡ್ಡಾಯ. ರೋಗಿಯ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ವ್ಯತ್ಯಾಸ, ಆಧಾರ್ ಲಿಂಕ್ ಆಗದ ಖಾತೆಗಳಿಗೆ ಹಣ ವರ್ಗಾವಣೆಯಾಗಿಲ್ಲ. ಆಧಾರ್ ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯದ 30 ಸಾವಿರಕ್ಕೂ ಅಧಿಕ ರೋಗಿಗಳಿಗೆ ₹30 ಕೋಟಿಗೂ ಅಧಿಕ ಹಣ ವರ್ಗಾಯಿಸಲಾಗಿದೆ. ಉಳಿದವರ ಖಾತೆಗಳಿಗೂ ಹಣ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ 81,585 ಕ್ಷಯ ರೋಗಿಗಳಿಗೆ ನಿಕ್ಷಯ್ ಪೋಷಣ್ ಯೋಜನೆ ಅಡಿ ಒಂದು ವರ್ಷದಿಂದ ಆರ್ಥಿಕ ನೆರವು ಸಿಗದ ಕುರಿತು ‘ಪ್ರಜಾವಾಣಿ’ಯು ಫೆ.2ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.