ಮೈಸೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಶನಿವಾರ ನಡೆಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಎಪಿಎಂಸಿಯ 14 ಸದಸ್ಯ ಬಲದಲ್ಲಿ ಕಾಂಗ್ರೆಸ್‍ನ ಹೊಸಹುಂಡಿ ರಘು ಅವರಿಗೆ ಮತದಾನ ಹಕ್ಕು ಇಲ್ಲ. ಆದ್ದರಿಂದ ಸದಸ್ಯ ಬಲ 13ಕ್ಕೆ ಇಳಿದಿದೆ. ಜೆಡಿಎಸ್ 8 ಹಾಗೂ ಕಾಂಗ್ರೆಸ್ 5 ಸದಸ್ಯರನ್ನು ಹೊಂದಿದೆ.

ಹಾಲಿ ಅಧ್ಯಕ್ಷ ಜೆಡಿಎಸ್‌ನ ಸಿದ್ದೇಗೌಡ ಮತ್ತೊಮ್ಮೆ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರ 20 ತಿಂಗಳ ಅಧಿಕಾರದ ಅವಧಿ ಇದೀಗ ಕೊನೆಗೊಂಡಿದೆ. ಸಿದ್ದೇಗೌಡ ಅವರಲ್ಲದೆ ಜೆಡಿಎಸ್‌ನಿಂದ ಗುಂಗ್ರಾಲ್ ಛತ್ರದ ನಾಗರಾಜ್, ಕೋಟೆಹುಂಡಿ ಮಹದೇವು ಮತ್ತು ಜವರಪ್ಪ ಅವರೂ ಆಕಾಂಕ್ಷಿಗಳಾಗಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರ ನಿರ್ಧಾರವೇ ಅಂತಿಮ ಎನ್ನಲಾಗಿದೆ. ಅವರು ಯಾರ ಕಡೆ ಒಲವು ತೋರುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ ಸಲ ತನ್ನದೇ ಸರ್ಕಾರವಿದ್ದ ಕಾರಣ ಮೂವರು ನಾಮನಿರ್ದೇಶಿತ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿತ್ತು. ಆದರೆ, ಕೊನೆಗಳಿಗೆಯಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯ ಅಡ್ಡ ಮತ ಮಾಡಿದ್ದರಿಂದ ಕಾಂಗ್ರೆಸ್‌ನ ಸಾವಿತ್ರಮ್ಮ ಅವರು ಕೇವಲ ಒಂದು ಮತದ ಅಂತರದಿಂದ ಸೋಲು ಅನುಭವಿಸಿದ್ದರು.

ಈ ಬಾರಿ ಕಾಂಗ್ರೆಸ್‌ನಿಂದ ಪ್ರಭು ಮತ್ತು ಸಾವಿತ್ರಮ್ಮ ಅವರ ಹೆಸರು ಕೇಳಿಬರುತ್ತಿದೆ. ಆದರೆ ಸಂಖ್ಯಾಬಲದ ಕೊರತೆಯಿರುವುದರಿಂದ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವುದು ಸುಲಭವಲ್ಲ ಎಂಬುದು ಕಾಂಗ್ರೆಸ್‌ಗೆ ತಿಳಿದಿದೆ. ಇದರಿಂದ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು, ಉಪಾಧ್ಯಕ್ಷ ಸ್ಥಾನ ಪಡೆಯುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ.

ಚುನಾವಣೆಗೆ ಸಕಲ ಸಿದ್ಧತೆ: ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಹಶೀಲ್ದಾರ್ ರಮೇಶ್ ಬಾಬು ಅವರು ತಿಳಿಸಿದರು. ಶನಿವಾರ ಬೆಳಿಗ್ಗೆ 10 ರಿಂದ 11ರ ವರೆಗೆ ನಾಮಪತ್ರ ಸಲ್ಲಿಕೆಯಾಗಲಿದೆ. 11 ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 11.30 ರಿಂದ 12ರ ವರೆಗೆ ನಾಮಪತ್ರ ವಾಪಸ್ ಪಡೆಯಬಹುದು. ಮಧ್ಯಾಹ್ನ 12.30 ರಿಂದ 1.30ರ ವರೆಗೆ ಮತದಾನ ನಡೆಯಲಿದ್ದು, ಆ ಬಳಿಕ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.