ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸದಾಗಿ ಹಲವು ಪ್ರಾಣಿಗಳು ಕೆಲವೇ ದಿನಗಳಲ್ಲಿ ಸೇರ್ಪಡೆಯಾಗಲಿದ್ದು, ಸಂದರ್ಶಕರನ್ನು ಆಕರ್ಷಿಸಲಿವೆ.

‘ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ 23 ಪ್ರಾಣಿಗಳನ್ನು ವಿದೇಶಗಳಿಂದ ತರಿಸಲಾಗಿದೆ. ಅವುಗಳನ್ನು ಮೈಸೂರು ಹಾಗೂ ಶಿವಮೊಗ್ಗ ಮೃಗಾಲಯಕ್ಕೆ ನೀಡಲಾಗುತ್ತಿದೆ. ಸಿಂಗಾಪುರದಂದ 8 ಹೆಣ್ಣು ಮತ್ತು 7 ಗಂಡು ಮಂಗಗಳ(ಹಮಾದ್ರಿಯಾಸ್ ಬಬೂನ್ಸ್)ನ್ನು ತರಲಾಗಿದೆ. ಅವರು ಮೂರು ಹೈನಾಗಳನ್ನು ಕೇಳಿದ್ದಾರೆ. ಜೆಕ್ ಗಣರಾಜ್ಯದಿಂದ ಮೂರು ಕಾಂಗರೂ (ವಾಲಬೀಸ್– ಒಂದು ಗಂಡು, ಎರಡು ಹೆಣ್ಣು) ಹಾಗೂ ಎರಡು ಗಂಡು ಹಾಗೂ ಮೂರು ಹೆಣ್ಣು ‘ರಿಂಗ್ ಟೇಲ್ಡ್ ಲೇಮರ್ಸ್’ಗಳನ್ನು ತರಲಾಗಿದೆ. ಇದಕ್ಕೆ ಪ್ರತಿಯಾಗಿ ಅವರು ಏನನ್ನೂ ಕೇಳಿಲ್ಲ. ಕಳೆದ ವರ್ಷ ನಮ್ಮಿಂದ ಜೋಡಿ ಪಕ್ಷಿಗಳನ್ನು ಪಡೆದಿದ್ದರು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾಹಿತಿ ನೀಡಿದರು.

ಸಿಂಗಾಪುರದಿಂದ ತರಲಾದ ಮಂಗಗಳಲ್ಲಿ ಐದನ್ನು (ಮೂರು ಗುಂಡು ಹಾಗೂ ಎರಡು ಹೆಣ್ಣು) ಶಿವಮೊಗ್ಗಕ್ಕೆ ರವಾನಿಸಲಾಗುವುದು. ಈ ಪ್ರಾಣಿಗಳು 9 ದಿನಗಳ ಹಿಂದೆಯೇ ಮೈಸೂರು ತಲುಪಿವೆ. ಅವುಗಳನ್ನು ಕೂರ್ಗಳ್ಳಿಯ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಾರ್ಗಸೂಚಿಯಂತೆ 21 ದಿನಗಳವರೆಗೆ ಅವು ಅಲ್ಲಿರಲಿವೆ. ಬಳಿಕ ಅವುಗಳನ್ನು ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.