ಮೈಸೂರು: ಪಿರಿಯಾಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ಮಹದೇವ್ ₹ 1.33 ಕೋಟಿ ಚರಾಸ್ತಿ ಹಾಗೂ ₹ 1.29 ಕೋಟಿ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹ 2.62 ಕೋಟಿ ಆಸ್ತಿ ಹೊಂದಿದ್ದಾರೆ.

ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ತಮ್ಮ ವಿರುದ್ಧ ಯಾವುದೇ ಪ್ರಕರಣವಿಲ್ಲ ಹಾಗೂ ಯಾವುದೇ ಹೊಣೆಗಾರಿಕೆ (ಸಾಲ) ಇಲ್ಲ ಎಂದು ತಿಳಿಸಿದ್ದಾರೆ.

ಪಿರಿಯಾಪಟ್ಟಣ ಪಟ್ಟಣದ ನಿವಾಸಿಯಾದ ಅವರು ವಿದ್ಯಾರ್ಹತೆ ಕಾಲಂನಲ್ಲಿ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ಎಂದು ನಮೂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. 2021–22ನೇ ಸಾಲಿನಲ್ಲಿ ₹ 19.08 ಲಕ್ಷ ಆದಾಯ ತೆರಿಗೆ ಪಾವತಿಸಿದ್ದಾರೆ. ಅವರ ಕೈಯಲ್ಲಿ ₹ 15.75 ಲಕ್ಷ ನಗದು ಇದೆ. ಬ್ಯಾಂಕ್‌ಗಳಲ್ಲಿ ₹ 77 ಲಕ್ಷ ಇಟ್ಟಿದ್ದಾರೆ. ಪತ್ನಿ ಸುಭದ್ರಮ್ಮ ಅವರ ಕೈಯಲ್ಲಿ ₹2.25 ಲಕ್ಷ ನಗದು ಇದೆ ಎಂದು ತಿಳಿಸಿದ್ದಾರೆ.

₹ 28 ಲಕ್ಷ ಮೌಲ್ಯದ ಟೊಯೊಟಾ ಇನ್ನೋವಾ ಕಾರು, ₹ 8.25 ಲಕ್ಷ ಮೌಲ್ಯದ 250 ಗ್ರಾಂ. ಚಿನ್ನ, ₹ 3 ಲಕ್ಷ ಮೌಲ್ಯದ ಪೀಠೋಪಕರಣ ಹೊಂದಿದ್ದಾರೆ. ವ್ಯವಸಾಯ, ವ್ಯಾಪಾರ ಮತ್ತು ವೇತನ ತಮ್ಮ ಆದಾಯದ ಮೂಲ ಎಂದು ತಿಳಿಸಿದ್ದಾರೆ. ಅವರ ಪತ್ನಿ ಬಳಿ ₹ 20.25 ಲಕ್ಷ ಮೌಲ್ಯದ 750 ಗ್ರಾಂ. ಚಿನ್ನ, ₹ 1.10 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ. ಬೆಳ್ಳಿ ಇದೆ. ಈ ದಂಪತಿಯು ದರ್ಶಿನಿ ವೇಸೈಡ್ ಫೆಸಿಲಿಟಿ (ಬಾರ್ ಅಂಡ್ ರೆಸ್ಟೋರೆಂಟ್)ಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.