ಮೈಸೂರು: ನಗರದಲ್ಲಿರುವ ಪೊಲೀಸ್ ಸಹಾಯವಾಣಿಗೆ (0821-2418400) ಇದೀಗ 20ರ ಹರೆಯ. ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಕೇಕ್ ಕತ್ತರಿಸುವ ಮೂಲಕ ಸಹಾಯವಾಣಿಯ ಜನ್ಮದಿನವನ್ನು ವಿನೂತನವಾಗಿ ಮಂಗಳವಾರ ಆಚರಿಸಿದರು.

ಇದೇ ವೇಳೆ ಮಾತನಾಡಿದ ಅವರು, ಸಹಾಯವಾಣಿಯು ಇದುವರೆಗೂ 37,380 ಪ್ರಕರಣಗಳಲ್ಲಿ ಸಮಾಲೋಚನೆ ನಡೆಸುವ ಮೂಲಕ ಸಾವಿರಾರು ಮಂದಿಯ ಬಾಳಿನಲ್ಲಿ ಬೆಳಕು ಮೂಡಿಸಿದೆ. ಇನ್ನು ಮುಂದೆಯೂ ಇದು ಕಾರ್ಯನಿರ್ವಹಿಸಲಿದ್ದು, ತೊಂದರೆಯಲ್ಲಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದರು.

ಪೊಲೀಸ್ ಸಹಾಯವಾಣಿಯ ಉಪಾಧ್ಯಕ್ಷೆ ಡಾ.ಮೋತಿ, ಕಾರ್ಯದರ್ಶಿ ಭಾರತೀಯ ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಜಯ್ ದುಡೇಜಾ, ಖಜಾಂಚಿ ಎಂ.ಆರ್.ದ್ವಾರಕನಾಥ್, ಡಿಸಿಪಿ ಮುತ್ತುರಾಜ್, ಎಸಿಪಿ ಗಜೇಂದ್ರ ಪ್ರಸಾದ್ ಹಾಗೂ ಸ್ವಯಂ ಸೇವಕರು ಇದ್ದರು.

ಆರಂಭವಾಗಿದ್ದು ಹೇಗೆ?
20 ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ವೇಳೆ ಸಾಂತ್ವನ ಈಕೆಗೆ ದೊರಕಿದ್ದರೆ ನಿಜವಾಗಿಯೂ ಈಕೆ ಬದುಕುತ್ತಿದ್ದಳು ಎಂಬುದನ್ನು ಮನಗಂಡ ಆಗಿನ ಪೊಲೀಸ್ ಕಮಿಷನರ್ ಸಿ.ಚಂದ್ರಶೇಖರ್ ಈ ಸಹಾಯವಾಣಿ ಆರಂಭಿಸಿದರು.

ಯಾವುದಕ್ಕೆಲ್ಲ ಸಹಾಯವಾಣಿ?
* ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ
* ವೈವಾಹಿಕ ತೊಂದರೆ, ಆಸ್ತಿ ವಿಚಾರ
* ಅನೈತಿಕ ಸಂಬಂಧ ಮತ್ತು ಮದುವೆ
* ಖಿನ್ನತೆ, ಕಾಯಿಲೆ, ಮಾದಕ ವಸ್ತುಗಳ ಸೇವನೆ
* ಆತ್ಮಹತ್ಯೆ ಯೋಚನೆ, ಮಾನಸಿಕ ಅಸ್ವಸ್ಥತೆ
* ಬಡತನ, ಹಣಕಾಸು ವ್ಯವಹಾರ, ಅಪರಾಧ
* ಕೌಟುಂಬಿಕ ಕಲಹ, ವಿದ್ಯಾರ್ಥಿಗಳ ಶೈಕ್ಷಣಿಕ ತೊಂದರೆ ಇದೇ ಮುಂತಾದ ಸಮಸ್ಯೆ ಉಳ್ಳವರು ಲಷ್ಕರ್ ಠಾಣೆಯಲ್ಲಿ ಇರುವ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ಅಥವಾ 0821-2418400 ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.