ಮೈಸೂರು: ಚಾಮರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿ (ಆಪ್) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಲವಿಕ ಗುಬ್ಬಿವಾಣಿ ಕೋಟ್ಯಧೀಶೆ. ಅವರು ಚರಾಸ್ತಿ ₹ 6.34 ಕೋಟಿ ಹಾಗೂ ₹ 6.11 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹ 12.45 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಇಲ್ಲಿನ ಜಯಲಕ್ಷ್ಮಿಪುರಂ ನಿವಾಸಿಯಾದ 49 ವರ್ಷ ವಯಸ್ಸಿನ ಅವರು ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿದ್ದಾರೆ. ತಮ್ಮ ಕೈಯಲ್ಲಿ ₹ 20ಸಾವಿರ ಹಾಗೂ ಪತಿ ರಾಘವೇಂದ್ರ ಉಡುಪ ಬಳಿ ₹ 20ಸಾವಿರ ನಗದು ಇದೆ ಎಂದು ತಿಳಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು ಠೇವಣಿ ಇಟ್ಟಿದ್ದಾರೆ ಹಾಗೂ ವಿವಿಧೆಡೆ ಷೇರುಗಳನ್ನು ಹೊಂದಿದ್ದಾರೆ. ಒಂದು ದ್ವಿಚಕ್ರವಾಹನ ಹಾಗೂ ಟೊಯೊಟಾ ಇನ್ನೋವಾ ಕಾರಿದೆ. ₹ 26 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ₹ 15.45 ಲಕ್ಷ ಮೌಲ್ಯದ ಸಾಲ (ಹೊಣೆಗಾರಿಕೆ) ಇದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಪದವೀಧರೆಯಾದ ಅವರು ಸಾಮಾಜಿಕ ಸೇವೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ. ಬಾಡಿಗೆ ಹಾಗೂ ಹೂಡಿಕೆಯಿಂದ ಬರುವ ವರಮಾನವು ತಮ್ಮ ಆದಾಯದ ಮೂಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.