ಖಾಸಗಿ ಆಸ್ಪತ್ರೆ ಮೂಲಕ ಔಷಧ ವಿತರಣೆ
‘ಯಾರಾದರೂ ಚಿಕಿತ್ಸೆಯಿಂದ ತಪ್ಪಿಸಿಕೊಂಡರೆ ಅವರಿಂದ ವರ್ಷಕ್ಕೆ 15 ಮಂದಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾರೂ ತಪ್ಪಿ ಹೋಗದಂತೆ ನೋಡಿಕೊಳ್ಳಲು ಖಾಸಗಿ ಆಸ್ಪತ್ರೆಗಳವರಿಗೂ ಸೂಚಿಸಲಾಗಿದೆ. ‘ಸ್ಟೆಪ್ಸ್’ ಕಾರ್ಯಕ್ರಮದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಜಾಗೃತಿ ಮೂಡಿಸಿ ಹಾಗೂ ತರಬೇತಿ ನೀಡಲಾಗುತ್ತಿದೆ. ಅವರ ಮೂಲಕವೂ ಔಷಧಿಗಳನ್ನು ಒದಗಿಸಲಾಗುತ್ತಿದೆ. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ತಲುಪಿಸಲಾಗುತ್ತಿದೆ’ ಎಂದು ಡಾ.ಸಿರಾಜ್ ಅಹಮದ್ ತಿಳಿಸಿದರು. ‘ನಿಕ್ಷೇಪ್’ ಪೋರ್ಟಲ್‌ನಲ್ಲಿ ಪ್ರತಿ ರೋಗಿಯ ಮಾಹಿತಿಯನ್ನೂ ದಾಖಲಿಸಲಾಗುತ್ತಿದೆ. 2025ಕ್ಕೆ ಕ್ಷಯ ಮುಕ್ತ ಭಾರತ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಉತ್ತಮವಾಗಿ ರೋಗಿಯ ಮೇಲ್ವಿಚಾರಣೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ₹1 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹೇಳಿದರು.