ಬರಡು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ವಿಭಿನ್ನ ವೇಷ ಧರಿಸಿ ಕುರಿ ತುಪ್ಪಟ ತೆಗೆಯುತ್ತಿದ್ದರೆ, ಇತ್ತ ಮೇಘಾಲಯದ ಆದಿವಾಸಿಗಳು ಕತ್ತಿ ಹಿಡಿದು ಕಾಯಕದಲ್ಲಿ ಮಗ್ನರಾಗಿದ್ದರು... ಹೀಗೆ ಭಾರತದ ಅಲೆಮಾರಿ ಸಮುದಾಯಗಳ ಸಮಗ್ರ ಜೀವನ ಶೈಲಿಯನ್ನು ಕಟ್ಟಿಕೊಡುವಂಥ ಚಿತ್ರಗಳು ಮತ್ತು ಸಾಮಗ್ರಿಗಳು ಅಲ್ಲಿದ್ದವು.

ಇಂಥ ಸಂಭ್ರಮ, ವಿಸ್ಮಯದ ದರ್ಶನವಾಗಿದ್ದು ನಗರದ ಇರ್ವಿನ್ ರಸ್ತೆಯ ವೆಲ್ಲಿಂಗ್ಟನ್ ಹೌಸ್ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿರುವ ‘ಭಾರತದ ಅಲೆಮಾರಿಗಳು’ ವಸ್ತು ಪ್ರದರ್ಶನದಲ್ಲಿ.

ಈ ವಸ್ತುಪ್ರದರ್ಶನವು ಪ್ರೇಕ್ಷಕರನ್ನು ತನ್ನತ್ತ ಸೆಳೆದು ಅವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ಮಾಡಿತು. ಇದಕ್ಕೆ ಮಾನವಶಾಸ್ತ್ರ ಸಂಸ್ಥೆ ಅಧ್ಯಕ್ಷ ಪ್ರೊ.ಪ್ರಮೋದ್ ಕುಮಾರ್ ಮಿಶ್ರ ಸೋಮವಾರ ಚಾಲನೆ ನೀಡಿದರು.

ಅಲೆಮಾರಿಗಳು ತಮ್ಮ ಆರ್ಥಿಕ ಸ್ಥಿತಿ ವೃದ್ಧಿಸಿಕೊಳ್ಳಲು ತಮ್ಮ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಾ ವಲಸೆ ಹೋಗುತ್ತಾರೆ. ಅಂಥ ಸಮುದಾಯಗಳ ಪರಿಚಯ, ಜೀವನಕ್ರಮ, ಅವರು ಉಪಯೋಗಿಸುವ ವಸ್ತುಗಳು, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಈ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದಲ್ಲಿ ಏನೇನಿವೆ?: ಅಲೆಮಾರಿಗಳು ಗೃಹ ಬಳಕೆಗೆ ಬಳಸುತ್ತಿದ್ದ ವಸ್ತುಗಳು, ವ್ಯಾಪಾರದ ಶೈಲಿ, ಎಂಬ್ರಾಯಿಡರಿ ವಸ್ತ್ರಗಳು, ಕುರಿ ಉಣ್ಣೆಯಿಂದ ತಯಾರಿಸಿದ ಕಂಬಳಿ, ಬೇಟೆಯಾಡಲು ಬಳಸುತ್ತಿದ್ದ ಸಾಧನಗಳು, ಕಾಸಿನ ಸರ, ಗೃಹ ಅಲಂಕಾರಿಕ ವಸ್ತುಗಳು ಹಾಗೂ ಪಾರಂಪರಿಕವಾಗಿ ಬಂದ ಕಸುಬುಗಳನ್ನು ಪರಿಚಯಿಸಿಕೊಡುವ ವಸ್ತುಗಳು ಅಲ್ಲಿ ಅನಾವರಣಗೊಂಡಿವೆ.

ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳ ಬುಡಕಟ್ಟು ಮತ್ತು ಅಲೆಮಾರಿ ಸಮುದಾಯದ ಜೀವನ ಕ್ರಮ, ಸಾಂಸ್ಕೃತಿಕ ಬದುಕು ಮತ್ತು ಕುಟುಂಬ ನಿರ್ವಹಣೆಗೆ ಅವರು ರೂಢಿಸಿಕೊಂಡಿದ್ದ ಆರ್ಥಿಕ ವ್ಯವಹಾರಗಳ ಕುರಿತಾದ ಛಾಯಾಚಿತ್ರ, ಗೃಹ ಬಳಕೆ ವಸ್ತುಗಳು, ಅಲೆಮಾರಿ ಸಮುದಾಯದ ಮಹಿಳೆಯರು ತೊಡುವ ಆಭರಣಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಅಲ್ಲದೇ, ಮೇಘಾಲಯದಲ್ಲಿ ‘ಖಾಸಿ’ ಬುಡಕಟ್ಟು ಜನಾಂಗವು ‘ಮಾಫ್ಲಾಂಗ್’ ಅರಣ್ಯ ಪ್ರದೇಶವನ್ನು ರಕ್ಷಿಸಲು ಅಲ್ಲಿನ ಜನರು ಮಾಡುವ ಧಾರ್ಮಿಕ ಆಚರಣೆಯ ವಿವರಣೆ ಹಾಗೂ ಗುಜರಾತಿನ ಬಂಜಾರ ಸಮುದಾಯ ಬಳಸುವ ನೆಕ್ಲೇಸ್ ಮಾದರಿಯ ‘ಹನ್ಸಾಲಿ’, ಬೆಳ್ಳಿಯ ಪದಾರ್ಥವಾದ ‘ಡಮರು’, ‘ಮೋತಿ ಗಾಗರ್ ಮಾಲಾ’,`ಕಡಲಾ’, ಆಂಧ್ರ ಪ್ರದೇಶದ ಲಂಬಾಣಿ ಸಮುದಾಯ ಬಳಸುವ ‘ಘಘ್ರಿ ಟಾಪೆಲ್’, ಗುಜ್ಜರ್ ಸಮುದಾಯದ ಜಾನಪದ ನೃತ್ಯಗಳ ಚಿತ್ರಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ನೃತ್ಯ ಪ್ರಕಾರಗಳ ವೈಭವ
ಮಿಜೋರಾಂನ ಚೆರೋ ನೃತ್ಯ, ಮಣಿಪುರದ ಪುಂಕೋಲನ್ ನೃತ್ಯ ಭಕ್ತಿ ಸಂಕೀರ್ತನೆ ಪ್ರಕಾರ, ಮದ್ದಲೆಯೊಂದಿಗೆ ನಾನಾ ತಾಳಗಳನ್ನು ಹಿಡಿದ ಕಲಾವಿದರು, ಅಸ್ಸಾಂನ ಬುಡಕಟ್ಟು ಮಹಿಳೆಯರ ರಂಚಾಂದ್ರಿ ನೃತ್ಯ, ತ್ರಿಪುರದ ಪ್ರಸಿದ್ಧ ನೃತ್ಯ ಹೋಜಗಿರಿ, ಅರುಣಾಚಲ ಪ್ರದೇಶದ ಬ್ರೋಜಿ ನೃತ್ಯ (ಅತಿಥಿಗಳನ್ನು ಸ್ವಾಗತಿಸಲು), ಮೇಘಾಲಯದ ಗರೋ ಬುಡಕಟ್ಟು ಜನಾಂಗದವರು ಅರಣ್ಯ ದೇವತೆಯನ್ನು ಪ್ರಾರ್ಥಿಸುವ ವಾಂಗಾಲಾ ನೃತ್ಯ ಪ್ರಕಾರಗಳನ್ನು ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.