ಸಿರವಾರ: ರಾಜಕೀಯ, ಉದ್ದಿಮೆ ವ್ಯವಹಾರ ಮಾಡಿಕೊಂಡು ದೊಡ್ಡ ಪಟ್ಟಣಗಳಲ್ಲಿ ಜೀವನ ನಡೆಸಿ ಬೇಸರ
ಗೊಂಡು ತೋಟಗಾರಿಕೆಯಿಂದ ನೆಮ್ಮದಿ ಜೀವನ ಕಟ್ಟಿಕೊಂಡ ಪಟ್ಟಣ ಎನ್.ಉದಯಕುಮಾರ ಅವರು ಯುವ ಕೃಷಿಕರಿಗೆ ಸ್ಪೂರ್ತಿಯಾಗಿದ್ದಾರೆ.

ಪಟ್ಟಣದಲ್ಲಿ 8 ಎಕರೆ ಜಮೀನಿನಲ್ಲಿ 2.5 ಎಕರೆ ಮಾವು, 2.5 ಎಕರೆ ಅಂಜೂರ್, 2.5 ಎಕರೆಯಲ್ಲಿ ಪೇರಲ ಜೊತೆಗೆ ನುಗ್ಗೆಕಾಯಿ ಬೆಳೆಯುತ್ತಿದ್ದಾರೆ.

ಸ್ವಂತವಾಗಿ ₹8 ಲಕ್ಷ ಹೂಡಿಕೆ ಮಾಡಿದ್ದು, ಹನಿ ನೀರಾವರಿ ಪದ್ದತಿ ಅಳವಡಿಕೆಗಾಗಿ ಸರ್ಕಾರದಿಂದ ಶೇ.90ರಷ್ಟು ಅನುದಾನ ಪಡೆದಿದ್ದಾರೆ.

ಹಣ್ಣುಗಳ ಸಂಗ್ರಹಕ್ಕಾಗಿ ಸರ್ಕಾರವು ₹2 ವೆಚ್ಚದ ಪ್ಯಾಕ್ ಹೌಸ್ ನಿರ್ಮಿ ಸಿಕೊಳ್ಳಲು ಸಹಾಯಧನ ನೀಡಿದೆ. ಕೇವಲ ಸಾವಯವ ಗೊಬ್ಬರವನ್ನು ಮಾತ್ರ ಬಳಕೆ ಮಾಡುತ್ತಿದ್ದು ಇದರಿಂದ ಭೂಮಿ ಫಲವತ್ತತೆಗೆ ಸಹಕಾರಿಯಾಗಿದೆ.

ಲಾಕ್ ಡೌನ್‌ನಿಂದಾಗಿ ಮಾರಾಟ ವ್ಯವಸ್ಥೆಯ ಕೊರತೆ ಇದ್ದರೂ ಮೊದಲ ಫಲಸಲಿನಲ್ಲಿ ನುಗ್ಗೆಕಾಯಿ, ಅಂಜೂರು ಮತ್ತು ಪೇರಲದಿಂದ ಅಧಿಕ ಲಾಭವಿಲ್ಲವಾದರೂ ಯಾವುದೇ ನಷ್ಟವಾಗದಂತೆ ಲಾಭ ದೊರೆತಿದೆ. ಸಾಮಾನ್ಯವಾಗಿ ಮೊದಲ ವರ್ಷ ತೋಟಗಾರಿಕೆ ಬೆಳೆಗಳಿಗೆ ಲಾಭ ಸಿಗುವುದಿಲ್ಲ. ಆದರೂ ಸ್ವಲ್ಪ ಪ್ರಮಾಣ ಲಾಭ ಸಿಕ್ಕಿರುವುದು ಅನು
ಕೂಲವಾಗಿದೆ, ಮುಂದಿನ ವರ್ಷಗಳಲ್ಲಿ ಅಧಿಕ ಲಾಭ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.

ಮುಂಗಾರ ಪ್ರಾರಂಭವಾಗಿದ್ದರಿಂದ ಈಗಾಗಲೇ ಮುಂದಿನ ಫಸಲಿಗಾಗಿ ಗಿಡಗಳ ಸಂರಕ್ಷಣೆ ಮಾಡಲಾಗುತ್ತಿದೆ. ಇಂದಿನ ಯುವಕರು ದೂರದ ಪಟ್ಟಣಗಳಿಗೆ ಹೋಗಿ ದುಡಿಯುವ ಬದಲಿಗೆ ಕೃಷಿಯಲ್ಲಿಯೇ ಕಡಿಮೆ ಹಣದಿಂದ ಉತ್ತಮ ಬೆಳೆ ಬೆಳೆಯುವ ಹಲವಾರು ತಂತ್ರಜ್ಞಾನ ಮತ್ತು ದಾರಿಗಳಿದ್ದು, ಉತ್ತಮ ಮಾರ್ಗದರ್ಶನ ಹಾಗೂ ತಿಳುವಳಿಕೆ ಜೊತೆಗೆ ಸ್ವಯಂ ಪರಿಶ್ರಮದಿಂದ ಕೃಷಿಯಿಂದಲೇ ಉತ್ತಮ ಲಾಭದ ಜೊತೆಗೆ ಆರೋಗ್ಯಕಾಪಾಡಿಕೊಳ್ಳಲು ಸಾಧ್ಯ ಎಂದು ಎನ್.ಉದಯಕುಮಾರ ಹೇಳುತ್ತಾರೆ.

ಒಂದು ಬಾರಿ ಬಂಡವಾಳ ಹಾಕಿ ಬೆಳೆಗಳನ್ನು ಸಂರಕ್ಷಣೆಯೊಂದಿಗೆ ಕಾಳಜಿ ಮಾಡಿದರೆ ಮುಂದಿನ ಕನಿಷ್ಠ ಹತ್ತು ವರ್ಷಗಳಾದರೂ ಉತ್ತಮ ಲಾಭ ಪಡೆಯಬಹುದು. ಕೇವಲ ಮಳೆ ಆಧಾರಿತ ಬೆಳೆಗಳನ್ನು ಅವಲಂಬಿಸಿರುವ ನಾವು ಪ್ರತಿ ವರ್ಷ ಲಾಭಕ್ಕಿಂತ ನಷ್ಟ ಅನುಭವಿಸುತ್ತಿದ್ದೇವೆ ಅದರ ಬದಲಿಗೆ ಹನಿ ನೀರಾವರಿ ಪದ್ದತಿಯಲ್ಲಿ ಮಿಶ್ರ ಬೆಳೆಗಳ ತೋಟಗಾರಿಕೆ ಮಾಡಿದರೆ ಅಧಿಕ ಲಾಭ ಪಡೆಯಲು ಸಾಧ್ಯ ಎನ್ನುತ್ತಾರೆ ಎನ್.ಉದಯಕುಮಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.