ರಾಯಚೂರು: ಕೋವಿಡ್‍ನಿಂದ ಮೃತಪಟ್ಟ ಪತಿಯ ಪರಿಹಾರ ಹಣಕ್ಕಾಗಿ ಅತ್ತೆ-ಸೊಸೆ ನಡುವೆ ಸಂಘರ್ಷ ನಡೆದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಮೃತನ ಪತ್ನಿ ನ್ಯಾಯ ಒದಗಿಸಿಕೊಡಬೇಕು ಎಂದು ಗುರುವಾರ ಕಣ್ಣೀರಿಟ್ಟರು ಪ್ರಸಂಗ ನಡೆದಿದೆ.

ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಬೋಧಕ ಆಸ್ಪತ್ರೆಯಲ್ಲಿ ಸಂಶೋಧನಾ ವಿಜ್ಞಾನಿಯಾಗಿದ್ದ ಲೋಹಿತ್.ಜಿ.ಕೆ ಅವರು ಕೊವಿಡ್‍ಗೆ ಬಲಿಯಾಗಿದ್ದರು.

ಕೊರೊನಾ ವಾರಿಯರ್‌ಗೆ ಸರ್ಕಾರದಿಂದ ಮಂಜೂರಾಗಿರುವ ₹50 ಲಕ್ಷ ಪರಿಹಾರ ಮೊತ್ತವನ್ನು ನನಗೆ ನೀಡದೇ ಗಂಡನ ತಾಯಿ (ಅತ್ತೆ) ಮಂಜುಳಾ.ಕೆ ಅವರಿಗೆ ನೀಡಲು ನಿರ್ಧರಿಸಿರುವುದಕ್ಕೆ ಪತ್ನಿ ಮಂಜುಳಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

’ರಿಮ್ಸ್ ಅಧಿಕಾರಿಗಳು ಪರಿಹಾರದ ಹಣವನ್ನು ಪತಿಯ ತಾಯಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ, ರಿಮ್ಸ್‌ನ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಕ್ಯಾರೇ ಎನ್ನುತ್ತಿಲ್ಲ. ಯಾವುದೇ ಕಾರಣಕ್ಕೂ ಪರಿಹಾರವನ್ನು ಅತ್ತೆಗೆ ನೀಡಬಾರದು’ ಎಂದು ಪತ್ನಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.