ರಾಯಚೂರು: ನಗರದ ಎಲ್ವಿಡಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮತ್ತು ರಾಯಚೂರು ಕರ್ನಾಟಕ ಸಂಘದ ಮಾಜಿ ಕಾರ್ಯದರ್ಶಿ ಎಂ.ಧೃವನಾರಾಯಣ (92) ಅವರು ಬೆಂಗಳೂರಿನ ನಿವಾಸದಲ್ಲಿ ಶನಿವಾರ ನಿಧನರಾದರು.

ಮೃತರಿಗೆ ಇತ್ತೀಚೆಗೆ ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದ ಜ್ಯೋತಿ ಮೂಲಿಮನಿ ಸೇರಿ ಇಬ್ಬರು ಪುತ್ರಿಯರು ಹಾಗೂ ಪತ್ನಿ ಇದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಿದ ಮಹನೀಯರಲ್ಲಿ ಒಬ್ಬರಾಗಿದ್ದು, ಕನ್ನಡದಲ್ಲಿ ಹಲವು ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಆಗಿದ್ದ ಅವರು ಸಂಘದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದರು.

ಸಂತಾಪ: ನಿಧನಕ್ಕೆ ರಾಯಚೂರ ಕರ್ನಾಟಕ ಸಂಘವು ಸಂತಾಪ ವ್ಯಕ್ತಪಡಿಸಿದೆ. ‘ಸದಾ ನೆನಪಿಡುವಂಥ ಸಾರ್ಥಕ ಸೇವೆಯನ್ನು ಧೃವನಾರಾಯಣ ಅವರು ಸಲ್ಲಿಸಿದ್ದಾರೆ. ಸಂಘವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಯಲು ಅವರ ಪಟ್ಟ ಶ್ರಮ ಮತ್ತು ಮಾರ್ಗದರ್ಶನ ಅಮೂಲ್ಯವಾದದ್ದು’ ಎಂದು ಸಂಘದ ಅಧ್ಯಕ್ಷ ನರಸಣ್ಣ ಅವರು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.