ಜಾಲಹಳ್ಳಿ: ಮೇ 7ರಂದು ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಆದರೂ ಕೂಲಿ ಕಾರ್ಮಿಕರು ಕೆಲಸ ಅರಸಿ ಗುಳೆ ಹೊರಟಿದ್ದಾರೆ.

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟ ಕಾರಣ ರೈತರು ಹಿಂಗಾರು ಬೆಳೆ ಬಿತ್ತನೆ ಮಾಡದೇ ಕೃಷಿ ಜಮೀನುಗಳನ್ನು ಪಾಳು ಬಿಟ್ಟು ಬೆಂಗಳೂರು ಹಾಗೂ ಪುಣೆ ನಗರಗಳಿಗೆ ಗುಳೆ ಹೋಗಿದ್ದರು. ಈಚೆಗೆ ನಡೆದ ಪಟ್ಟಣದ ರಂಗನಾಥ ಸ್ವಾಮಿ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿದ ಕಾರಣ ಶನಿವಾರ ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ಗುಳೆ ಹೊರಡಲು ಅನೇಕ ಜನ ಸೇರಿದ್ದು ಕಂಡುಬಂತು.

ಜಾಲಹಳ್ಳಿಯಿಂದ ಪ್ರತಿನಿತ್ಯ ಸಾರಿಗೆ ಸಂಸ್ಥೆಯ ಮೂರು ಬಸ್ಗಳು ಬೆಂಗಳೂರಿಗೆ ತೆರಳುತ್ತವೆ. ಒಂದು ಬಸ್ನಲ್ಲಿ ಕನಿಷ್ಟ 80 ರಿಂದ 90 ಜನ ಪ್ರಯಾಣ ಮಾಡುತ್ತಾರೆ. ಐದು ಖಾಸಗಿ ಬಸ್ಗಳೂ ಹೋಗುತ್ತಿವೆ. ಪುಣೆಗೆ ನಿತ್ಯ ಸಾರಿಗೆ ಸಂಸ್ಥೆಯ ಒಂದು ಹಾಗೂ ಎರಡು ಖಾಸಗಿ ಬಸ್ಗಳು ಹೋಗುತ್ತವೆ.

‘ನಾವು ಎರಡು ವರ್ಷಗಳಿಂದ ಕುಟುಂಬ ಸಮೇತವಾಗಿ ಬೆಂಗಳೂರು ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದೇವೆ. ಜಾತ್ರೆಯ ಕಾರಣ ಬಂದಿದ್ದೆವು. ಜಾತ್ರೆ ಮುಗಿದಿದೆ. ಇಲ್ಲಿಯೇ ಕುಳಿತರೆ ಜೀವನ ಸಾಗಿಸುವುದು ಕಷ್ಟ. ತುತ್ತಿನ ಚೀಲ ತುಂಬಿಸಿಕೊಳ್ಳಲು ಮಡದಿ ಮಕ್ಕಳೊಂದಿಗೆ ಗುಳೆ ಹೊರಟ್ಟಿದ್ದೇನೆ’ ಕೂಲಿ ಕಾರ್ಮಿಕ ಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ನರೇಗಾ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಸುಮಾರು ₹200 ಕೋಟಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ₹49 ಕೋಟಿಯನ್ನು ಕೆಲಸಕ್ಕೆ ಬಾರದ ಕೂಲಿಕಾರರ ಖಾತೆಗಳಿಗೆ ಜಮಾ ಬಳಿಕ ಎತ್ತುವಳಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ತಕ್ಷಣ ಬಡವರಿಗೆ ಸ್ಥಳೀಯವಾಗಿ ಕೆಲಸ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.