ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಬಸ್‌ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

Published : 18 ಜೂನ್ 2024, 14:32 IST
Last Updated : 18 ಜೂನ್ 2024, 14:32 IST
ಫಾಲೋ ಮಾಡಿ
Comments

ಕವಿತಾಳ: ಬಸ್‌ ಸೌಲಭ್ಯವಿಲ್ಲದೆ ಸಮೀಪದ ನೆಲಕೊಳ, ಕಾಚಾಪುರ ಮತ್ತು ಯತಗಲ್‌ ಗ್ರಾಮದ ವಿದ್ಯಾರ್ಥಿಗಳಿಗೆ ನಿತ್ಯ 7 ಕಿ.ಮೀ. ದೂರ ನಡೆಯುವುದು ಅನಿವಾರ್ಯವಾಗಿದೆ.

ಮೂರು ಗ್ರಾಮಗಳ ಅಂದಾಜು 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಮೀನಗಡ, ಹಟ್ಟಿ, ನಿಲಗಲ್‌, ಲಿಂಗಸುಗೂರು ಮತ್ತು ಕವಿತಾಳ ಪಟ್ಟಣದ ಶಾಲಾ– ಕಾಲೇಜುಗಳಿಗೆ ಹೋಗುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್‌ ಬಾರದ ಕಾರಣ ಅಮೀನಗಡದವರೆಗೆ ನಡೆಯವುದು ಅನಿವಾರ್ಯವಾಗಿದೆ.

‘ಗ್ರಾಮಕ್ಕೆ ನಿತ್ಯ ಬಸ್‌ ಬರುವುದಿಲ್ಲ. ಬೆಳಿಗ್ಗೆ 8 ಗಂಟೆಗೆ ಬಸ್‌ ಬಿಟ್ಟರೆ ಶಾಲಾ– ಕಾಲೇಜಿಗೆ ತೆರಳಲು ಮತ್ತು ಸಂಜೆ ವಾಪಸ್‌ ಬರಲು ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯವಿಲ್ಲ. ಹೀಗಾಗಿ ಮಕ್ಕಳು ನಿತ್ಯ ನಡೆದುಕೊಂಡು ಹೋಗುತ್ತಾರೆ. ಈ ಕುರಿತು ಲಿಂಗಸುಗೂರು ಘಟಕ ವ್ಯವಸ್ಥಾಪಕರನ್ನು ಕೇಳಿದರೆ ಅವರು ಮಸ್ಕಿ ಡಿಪೊ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಸೂಚಿಸುತ್ತಾರೆ. ಆದರೆ ಮಸ್ಕಿ ಡಿಪೊ ವ್ಯವಸ್ಥಾಪಕರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಪಾಲಕರಾದ ಮಲ್ಲಪ್ಪ ನೆಲಕೊಳ ಮತ್ತು ಯಮನೂರು ಯತಗಲ್‌ ಹೇಳಿದರು.

ಕವಿತಾಳ ಸಮೀಪದ ಯತಗಲ್‌ ಮತ್ತು ಕಾಚಾಪುರ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ ನಡೆದುಕೊಂಡು ಹೋಗುತ್ತಿರುವುದು.
ಕವಿತಾಳ ಸಮೀಪದ ಯತಗಲ್‌ ಮತ್ತು ಕಾಚಾಪುರ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಮದ್ಯಾಹ್ನ ನಡೆದುಕೊಂಡು ಹೋಗುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT