ಚನ್ನಪಟ್ಟಣ (ರಾಮನಗರ): ‘ಇದು ನನ್ನ ತಾಲ್ಲೂಕು. ನಾನು ಇಲ್ಲೇ ಚಕ್ಕೆರೆಯಲ್ಲಿ ಹುಟ್ಟು ಬೆಳೆದವನು. ಕ್ಷೇತ್ರದ ಸಮಸ್ಯೆಗಳು ಹಾಗೂ ಇಲ್ಲಿನ ಜನರ ಭಾವನೆಗಳು ಏನೆಂದು ನನಗೆ ಚನ್ನಾಗಿ ಗೊತ್ತಿದೆ. ಕ್ಷೇತ್ರದಲ್ಲಿ ಎರಡು ಸಲ ಗೆದ್ದು ಒಮ್ಮೆ ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೇ ತಾಲ್ಲೂಕಿನ ಪರಿಚಯವಿಲ್ಲ. ಹಳ್ಳಿಗಳ ಹೆಸರೂ ಸರಿಯಾಗಿ ಗೊತ್ತಿಲ್ಲ. ಇನ್ನು ಅವರ ಪುತ್ರ ನಿಖಿಲ್ಗೇ ಏನು ಗೊತ್ತು?’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪ್ರಶ್ನಿಸಿದರು.

ತಾಲ್ಲೂಕಿನ ಗ್ರಾಮೀಣ ಭಾಗದ ವಿವಿಧ ಗ್ರಾಮಗಳಲ್ಲಿ ಬುಧವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಹಳ್ಳಿಗಳಲ್ಲಿ ಮತ ಯಾಚಿಸುತ್ತಿರುವ ನನಗೆ ಜನ ಬೆಂಬಲ ದೊಡ್ಡ ಮಟ್ಟದಲ್ಲಿ ಸಿಗುತ್ತಿದೆ. ಎರಡು ಸಲ ಸೋತಿರುವ ನನಗೆ ಆಶೀರ್ವಾದ ಮಾಡಿ ಎಂದು ಜನರನ್ನು ಕೇಳುವ ಜೊತೆಗೆ, ಕುಮಾರಸ್ವಾಮಿ ಅವರ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದೇನೆ. ಜನರಿಗೂ ಅದರ ಅರಿವಿದೆ’ ಎಂದರು.

‘ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಯೋಜನೆಗಳ ಫಲಾನುಭವಿಗಳು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ. ಜೊತೆಗೆ, ಕಾಂಗ್ರೆಸ್ನ ಎಲ್ಲಾ ನಾಯಕರು ನನ್ನ ಬೆನ್ನಿಗೆ ನಿಂತು ಬೆಂಬಲಿಸುತ್ತಿದ್ದಾರೆ. ಹೋದಲ್ಲೆಲ್ಲಾ ಪಕ್ಷಾತೀತವಾಗಿ ಜನರು ನನ್ನ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

‘ನಾನೆಂದು ಸ್ವಾರ್ಥ ರಾಜಕಾರಣ ಮಾಡಿಲ್ಲ. ನನ್ನ ಪಕ್ಷಾಂತರ ಕ್ಷೇತ್ರದ ಅಭಿವೃದ್ಧಿಗಾಗಿಯೇ ಹೊರತು, ವೈಯಕ್ತಿಕ ಅನುಕೂಲಕ್ಕಲ್ಲ. ತಾಲ್ಲೂಕಿನ ಕೆರೆಗಳನ್ನು ತುಂಬಿಸಿದ ಕಾರ್ಯವನ್ನು ಹೋದಲ್ಲೆಲ್ಲಾ ಜನ ನೆನಪಿಸಿಕೊಳ್ಳುತ್ತಿದ್ದಾರೆ. ನನ್ನಿಂದಾಗಿ ಅವರ ಬದುಕು ಹಸನಾಗಿದೆ ಎಂದು ಹೇಳುತ್ತಿದ್ದಾರೆ. ನನ್ನನ್ನೇ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು’ ಎಂದರು.

‘ಸ್ಪಂದಿಸುವ ನಿಮ್ಮೂರಿನ ಮಗ’

‘ನಿಮ್ಮ ಕಷ್ಟ– ಸುಖಕ್ಕೆ ಸ್ಪಂದಿಸುವುದು ನಿಮ್ಮೂರಿನ ಮಗನೇ ಹೊರತು ಹೊರಗಡೆಯಿಂದ ಬಂದಿರುವವರಲ್ಲ. ಈ ಚುನಾವಣೆಯಲ್ಲಿ ನಿಮ್ಮ ಮನೆ ಮಗ ಯೋಗೇಶ್ವರ್ ಅಭ್ಯರ್ಥಿಯಾಗಿದ್ದಾರೆ. ನಿಖಿಲ್ ನಿಮ್ಮೂರಿನವರಲ್ಲ. ಯೋಗೇಶ್ವರ್ ನಿಮ್ಮ ಚಕ್ಕೆರೆಯಲ್ಲೇ ಮಣ್ಣಾಗುತ್ತಾರೆ. ಯಾವ ಕ್ಷಣದಲ್ಲೇ ತೊಂದರೆಯಾದರೂ ಓಡಿ ಬರುತ್ತಾರೆ. ಇಲ್ಲಿ ಎರಡು ಸಲ ಗೆದ್ದಿದ್ದ ಕುಮಾರಸ್ವಾಮಿ ಅವರು ಕಳೆದ ಆರು ವರ್ಷದಲ್ಲಿ ಎಂದಾದರೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ದಾರಾ? ನೀವು ಯೋಗೇಶ್ವರ್ ಅವರನ್ನು ಗೆಲ್ಲಿಸಿದ್ದರೆ ಇಷ್ಟು ಹೊತ್ತಿಗೆ ಹತ್ತಾರು ಬಾರಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದರು. ಈಗಲೂ ಅವರು ಬರುತ್ತಿದ್ದಾರೆ. ಇದು ನಮ್ಮ ಊರು ನಮ್ಮ ಜನ ಎಂಬ ಕಾರಣಕ್ಕೆ ಅವರು ಬರುತ್ತಾರೆ. ಅಂತಹವರನ್ನು ಮತ್ತೆ ಗೆಲ್ಲಿಸಿ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು’ ಎಂದು ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.