ರಮೇಶ್ ಯೋಜನಾ ನಿರ್ದೇಶಕ ಜಿಲ್ಲಾ ನಗರಾಭಿವೃದ್ಧಿ ಕೋಶ ರಾಮನಗರ
ಬೇರೆ ಇಲಾಖೆಯವರು ಬಳಸುತ್ತಿರುವ ಕಾರಿಗೆ ಯೋಜನಾ ನಿರ್ದೇಶಕರು ಬಿಲ್ ಪಾವತಿಸಿಕೊಂಡು ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ ಕ್ರಮಕ್ಕೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ
ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ
‘ಅನುಮತಿ ಪಡೆದು ಪ್ರಕರಣ’
‘ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ (ಪಿ.ಡಿ) ವಿರುದ್ಧ ಜಿಲ್ಲಾಧಿಕಾರಿ ನೀಡಿರುವ ಹಣ ದುರುಪಯೋಗ ದೂರಿಗೆ ಸಂಬಂಧಿಸಿದಂತೆ ಅವರ ಇಲಾಖೆಯ ಮೇಲಧಿಕಾರಿಗಳಿಂದ ತನಿಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗುವುದು. ಅನುಮತಿ ಸಿಕ್ಕ ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಲೋಕಾಯುಕ್ತ ಎಸ್.ಪಿ ಸ್ನೇಹಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಿಯಮ ಪ್ರಕಾರವೇ ಕಾರು ಬಳಕೆ’ ‘ನಿಯಮಗಳ ಪ್ರಕಾರವೇ ಟೆಂಡರ್ ಕರೆದು ಕಾರನ್ನು ಬಾಡಿಗೆಗೆ ಪಡೆಯಲಾಗಿದೆ. ಆದರೆ ಮೊದಲು ನಿಗದಿಯಾಗಿದ್ದ ಕಾರಿನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಟೆಂಡರ್‌ದಾರ ಬೇರೆ ಕಾರಿನ ಸೇವೆ ಒದಗಿಸಿದ್ದಾನೆ. ಆ ಕಾರಿಗೆ ಬಾಡಿಗೆ ಮೊತ್ತ ಪಾವತಿಯಾಗಿದೆ. ಇದರಲ್ಲಿ ಹಣ ದುರುಪಯೋಗದ ಪ್ರಶ್ನೆಯೇ ಬರುವುದಿಲ್ಲ’ ಎಂದು ತಮ್ಮ ವಿರುದ್ಧದ ಆರೋಪದ ಕುರಿತು ಯೋಜನಾ ನಿರ್ದೇಶಕ ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.