ಬಿಡದಿ: ಲಾಕ್‌ಡೌನ್ ಪರಿಣಾಮ ಬ್ರಾಯ್ಲರ್ ಕೋಳಿ ಧಾರಣೆ ದಿಢೀರ್ ಕುಸಿತ ಕಂಡಿದ್ದು, ಸಾಕಾಣಿಕೆದಾರರುಕಂಗಾಲಾಗಿದ್ದಾರೆ.

ಕಳೆದ ವಾರ ಒಂದು ಕೆ.ಜಿ.ಗೆ ₹160 ಬೆಲೆ ಇತ್ತು. ಪ್ರಸ್ತುತ ಕೆ.ಜಿ.ಗೆ ಮಾರುಕಟ್ಟೆಯಲ್ಲಿ ₹ 60ಕ್ಕೆ ಇಳಿದಿದೆ. ಈ ನಡುವೆ ವ್ಯಾಪಾರಿಗಳು ಸಾಕಾಣಿಕೆದಾರರಿಂದ ಒಂದು ಕೆ.ಜಿ.ಗೆ ₹ 30ರಿಂದ ₹ 40 ನೀಡಿ ಖರೀದಿ ಮಾಡುತ್ತಿದ್ದಾರೆ. ಇದು ಸಾಕಾಣಿಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೂಡಿದ ಬಂಡವಾಳವೂ ಅವರ ಕೈಸೇರುತ್ತಿಲ್ಲ. ಹಾಗಾಗಿ, ನಷ್ಟ ಅನುಭವಿಸುವಂತಾಗಿದೆ.

‘ನಾವು ಸುಮಾರು 15 ವರ್ಷಗಳಿಂದ ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ದಿಢೀರನೇ ಬೆಲೆ ಕುಸಿತದಿಂದ ಯಾವುದೇ ಲಾಭ ಕಾಣಲಿಲ್ಲ. ಸರ್ಕಾರ ಮಧ್ಯಸ್ಥಿಕೆವಹಿಸಿ ಸೂಕ್ತ ದರ ನಿಗದಿಪಡಿಸಬೇಕು’ ಎಂದುಕೋಳಿ ಸಾಕಾಣಿಕೆದಾರ ಸುಹಾಸ್ ಒತ್ತಾಯಿಸಿದರು.

ಕುಕ್ಕುಟೋದ್ಯಮ ನಂಬಿಕೊಂಡು 6 ಜನರು ಜೀವನ ಸಾಗಿಸುತ್ತಿದ್ದು ಇದೀಗ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ಕೋಳಿ ಸಾಕಾಣಿಕೆದಾರರಿಗೆ ಲಾಕ್‌ಡೌನ್‌ನಲ್ಲಿಯೂ ಮಾರಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂಬುದು ಎಸ್.ಜಿ. ಫೌಲ್ಟ್ರಿ ಫಾರಂ ಮಾಲೀಕರ ಒತ್ತಾಯ.

ಕಳೆದ ತಿಂಗಳಿನಲ್ಲಿ ಕೋಳಿ ಆಹಾರ ಒಂದು ಕೆ.ಜಿ.ಗೆ ₹ 25 ಇತ್ತು. ಈಗ ₹ 30ಕ್ಕೆ ಏರಿಕೆಯಾಗಿದೆ. ಕೋಳಿಯ ಆಹಾರ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದ ಕೋಳಿ ಮಾಂಸದ ಉತ್ಪಾದನೆ ಕಡಿಮೆಯಾಗಿದೆ. ಕೋಳಿಮರಿಯ ಬೆಲೆಯೂ ಏರುತ್ತಿದೆ. ಕುಕ್ಕುಟೋದ್ಯಮ ನಷ್ಟದ ಸುಳಿಗೆ ಸಿಲುಕಿದೆ. ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.