ಬಿಡದಿ: ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ಬಿಡದಿ ಹೋಬಳಿಯ ಹೆಗ್ಗಡಗೆರೆ ಗ್ರಾಮದಲ್ಲಿ ನಡೆದಿದೆ.

ಹೆಗ್ಗಡಗೆರೆ ಗ್ರಾಮದ ರೈತ ಮಹಿಳೆ ಆರ್. ಶೋಭಾ ಅವರಿಗೆ ಸೇರಿದ ಕೋಳಿ ಫಾರಂನಲ್ಲಿ ಪ್ರತ್ಯೇಕ ಶೆಡ್‌ಗಳಲ್ಲಿ 6 ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಕಣೆ ಮಾಡಲಾಗುತ್ತಿತ್ತು.

‘ಭಾನುವಾರ ರಾತ್ರಿ ಸುರಿದ ಮಳೆಯಿಂದ ಒಂದು ಶೆಡ್ಡಿನಲ್ಲಿದ್ದ 15 ದಿನದ ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಅಲ್ಲದೇ, ಅದೇ ಶೆಡ್ಡಿನಲ್ಲಿದ್ದ 40 ಸಾವಿರಕ್ಕೂ ಅಧಿಕ ಮೌಲ್ಯದ ಕೋಳಿ ಆಹಾರ (ಫೀಡ್ಸ್), ಹೊಟ್ಟು ಹಾಳಾಗಿವೆ. ಅಲ್ಲದೇ, ಶೆಡ್ಡಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ. ಒಟ್ಟಾರೆ ಒಂದು ಲಕ್ಷ ರೂಪಾಯಿನಷ್ಟು ನಷ್ಟವಾಗಿದೆ’ ಎಂದು ರೈತ ಮಹಿಳೆ ಶೋಭಾ ಸಂಕಷ್ಟ ತೋಡಿಕೊಂಡರು.

‘ಇನ್ನು 15-20 ದಿನ ಕಳೆದಿದ್ದರೇ ಸಾವಿರಾರು ರೂಪಾಯಿ ರೈತ ಮಹಿಳೆಗೆ ಆದಾಯ ಬರುತ್ತಿತ್ತು. ವರುಣನ ಆರ್ಭಟದಿಂದ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಕಂಗಾಲಾಗಿರುವ ಈ ರೈತ ಮಹಿಳೆಗೆ ಜಿಲ್ಲಾಡಳಿತ ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ ಪರಿಹಾರ ನೀಡಬೇಕು’ ಎಮದು ಹೆಗ್ಗಡಗೆರೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.