ಶಿವಮೊಗ್ಗ: ಅರ್ಹ ಅಂಗವಿಕಲರಿಗೆಗುರುತಿನ ಚೀಟಿ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲುಅಧಿಕಾರಿಗಳುವಿಶೇಷ ಕಾಳಜಿ ವಹಿಸಬೇಕು ಎಂದುಅಂಗವಿಕಲ ಕಲ್ಯಾಣ ಸಮಿತಿಆಯುಕ್ತ ವಿ.ಎಸ್. ಬಸವರಾಜುತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಆಯೋಜಿಸಿದ್ದ ಸಮಾಲೋಚನಾಸಭೆಯಲ್ಲಿ ಅವರು ಮಾತನಾಡಿದರು.

ಅಂಗವಿಕಲರ ಗುರುತಿಸಲು ಸುಮಾರು 21 ಮಾದರಿ ನಿಗದಿಪಡಿಸಲಾಗಿದೆ. ಈ ಮಾನದಂಡ ಅನುಸರಿಸಿವಿವಿಧ ಇಲಾಖೆಗಳ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಬೇಕು.ಅಂಗವಿಕಲರಿಗೆಸೌಲತ್ತು ಒದಗಿಸುವುದು ವ್ಯವಸ್ಥೆಯ ಒಂದು ಭಾಗ. ಹಾಗಾಗಿ, ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಅಂಗವಿಕಲರ ಕಲ್ಯಾಣಕ್ಕಾಗಿ ನಿಯೋಜಿತರಾಗಿರುವ ಸಿಬ್ಬಂದಿಯೋಜನೆಯ ಅನುಷ್ಠಾನದ ಕುರಿತು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಅಂಗವಿಕಲರಕಲ್ಯಾಣಕ್ಕಾಗಿ ಈ ಹಿಂದೆ ಶೇ 3ರಷ್ಟುಇದ್ದ ಅನುದಾನ ಶೇ 5ಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ಅನುದಾನ ಅಂಗವಿಕಲರ ಕಲ್ಯಾಣಕ್ಕಾಗಿ ಬಳಸಬೇಕು.ಅಂಗವಿಕಲರ ಸೌಲಭ್ಯ ಹೊಂದಲು ನಕಲಿ ಪ್ರಮಾಣ ಪತ್ರ ಹೊಂದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದರು.

ಬಸ್ನಿಲ್ದಾಣಗಳಲ್ಲಿ ವ್ಹೀಲ್ ಚೇರ್, ತ್ರಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ, ಶೌಚಾಲಯ, ಬಸ್ಪಾಸ್ ಸೌಲಭ್ಯ ಒದಗಿಸಬೇಕು.ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲರಿಗೆ ಮಾಸಾಶನ,ವಿದ್ಯಾರ್ಥಿ ವೇತನಕೊಡಿಸುವುದು. ಅವರು ಸರ್ವಾಂಗೀಣ ವಿಕಾಸ ಹೊಂದಲು ಯತ್ನಿಸಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲಿ ದಾಖಲಾಗಿರುವ ಮೂಕ ಮತ್ತು ಕಿವುಡ ಮಕ್ಕಳು ತಜ್ಞ ವೈದ್ಯರ ಸೇವೆ ಬಳಸಿಕೊಳ್ಳಲು ಶಿಕ್ಷಣ ಇಲಾಖೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮಾಹಿತಿ ರವಾನಿಸಬೇಕು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವಅಂಗವಿಕಲ ಸ್ವಯಂ ಸೇವಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಅಡಿ ಉದ್ಯೋಗ ಚೀಟಿ ನೀಡಲು ಉದಾಸೀನ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಪಿಡಿಒಗಳು ಕಾಳಜಿ ವಹಿಸಿ ಈ ಸಮಸ್ಯೆ ಬಗೆಹರಿಸಬೇಕುಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮಾತನಾಡಿ, ಒಂದೇ ಫಲಾನುಭವಿಗೆ ಬೇರೆ-ಬೇರೆ ಸಂಸ್ಥೆಗಳು ಸೌಲಭ್ಯ ಒದಗಿಸುತ್ತಿರುವುದುಸಲ್ಲದು.ಒಬ್ಬ ವ್ಯಕ್ತಿಗೆ ಯೋಜನೆಯ ಪೂರ್ತಿ ಹಣ ಬಳಸುವುದು ಸೂಕ್ತವಲ್ಲ. ಒಂದು ಸಂಸ್ಥೆಗೆ ಬಿಡುಗಡೆಯಾಗಿರುವ ಅಥವಾ ಕಾಯ್ದಿರಿಸಿದ ಅನುದಾನ ಹೆಚ್ಚಿನ ಫಲಾನುಭವಿಗಳು ಬಳಸಿಕೊಳ್ಳುವಂತೆ ಕ್ರಿಯಾಯೋಜನೆ ರೂಪಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿಸಿಇಒಕೆ. ಶಿವರಾಮೇಗೌಡ,ಅಂಗವಿಕಲ ಕಲ್ಯಾಣ ಸಮಿತಿ ಸಹಾಯಕ ಆಯುಕ್ತ ಪದ್ಮನಾಭ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.