ಭದ್ರಾವತಿ: ಇಲ್ಲಿನ ನ್ಯೂಟೌನ್ ಗರ್ಲ್ಸ್ ಹೈಸ್ಕೂಲ್ ಪಕ್ಕದ ಮರದ ಬುಡದಲ್ಲಿ ಸೋಮವಾರ ಭ್ರೂಣ ಪತ್ತೆಯಾಗಿದೆ.

ಮಧ್ಯಾಹ್ನ ಮರದ ಬುಡದಲ್ಲಿ ಬಿದ್ದ ಭ್ರೂಣವನ್ನು ನೋಡಿದ ನಾಗರಿಕರು ನ್ಯೂಟೌನ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಭ್ರೂಣ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು.

ಭ್ರೂಣವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಒಪ್ಪಿಸಿದ್ದು ಮೂರು ದಿನಗಳವರೆಗೆ ಕೋಲ್ಡ್ ಸ್ಟೋರೇಜ್ ವಿಭಾಗದಲ್ಲಿ ಇಡಲಾಗಿದೆ.

‘ಪೊಲೀಸರು ಭ್ರೂಣ ಇಡಲು ಅನುಮತಿ ಕೇಳಿದ್ದರ ಮೇರೆಗೆ ಅದನ್ನು ನಮ್ಮ ಆಸ್ಪತ್ರೆ ಶವಾಗಾರದ ಕೋಲ್ಡ್ ಸ್ಟೋರೇಜ್ ಯೂನಿಟ್ ವಿಭಾಗದಲ್ಲಿ ಇಡಲಾಗಿದೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭ್ರೂಣ ಸಿಕ್ಕ ಸಂಬಂಧ ಮಾಹಿತಿ ಇದೆ.ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಅನುಮತಿ ಮೇರೆಗೆ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.