ಶಿವಮೊಗ್ಗ: ಎರಡು ತಿಂಗಳ ಕಾಲ ತಟಸ್ಥವಾಗಿದ್ದ ತೈಲ ದರ, ದಿಢೀರನೆ ಏರಲಾರಂಭಿಸಿದೆ. ಸತತ ಐದನೇ ದಿನ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಶನಿವಾರ ಲೀಟರ್ಗೆ ಪೆಟ್ರೋಲ್ ದರ 24 ಪೈಸೆ ಏರಿಕೆಯಾಗಿ ₹ 86.15ಕ್ಕೆ ತಲುಪಿದೆ. ಡೀಸೆಲ್ ದರ 28 ಪೈಸೆ ಹೆಚ್ಚಾಗಿದ್ದು, ₹ 77.55ಕ್ಕೆ ಮುಟ್ಟಿದೆ.

ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ ನಂತರದ ದಿನಗಳಲ್ಲಿ ಇಳಿಮುಖವಾಗಿತ್ತು. ಎರಡು ತಿಂಗಳ ಕಾಲ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿರಲಿಲ್ಲ. ನ.20ರ ನಂತರ ಮತ್ತೆ ಪೆಟ್ರೋಲ್, ಡೀಸೆಲ್ ದರವು ನಿತ್ಯ ಏರಿಕೆ ಕಾಣುತ್ತಿದೆ.

ಜಿಲ್ಲೆಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ₹ 85.60, ಡೀಸೆಲ್ ಬೆಲೆ ₹ 76.79 ಇತ್ತು. ಗುರುವಾರ ಪೆಟ್ರೋಲ್ 11 ಪೈಸೆ ಏರಿಕೆಯೊಂದಿಗೆ 85.71, ಡಿಸೇಲ್ 22 ಪೈಸೆ ಏರಿಕೆಯೊಂದಿಗೆ ₹ 77.01ಕ್ಕೆ ತಲುಪಿತ್ತು. ಶುಕ್ರವಾರ ₹ 85.91 ಇದ್ದ ಪೆಟ್ರೋಲ್ ಬೆಲೆ ಶನಿವಾರಕ್ಕೆ ₹ 86.15ಕ್ಕೆ ಏರಿಕೆ ಕಂಡಿದೆ. ಡಿಸೇಲ್ ಬೆಲೆ ₹ 77.55 ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.