ಶಿವಮೊಗ್ಗ:ಕರ್ನಾಟಕಸಂಘದ ಸಭಾಂಗಣದಲ್ಲಿನ.16 ಮತ್ತು 17 ರಂದುರಂಗೋತ್ಸವ ಆಯೋಜಿಸಲಾಗಿದೆ.

ನಮ್ಮ ಹಳ್ಳಿ ಥಿಯೆಟರ್ ಹವ್ಯಾಸಿ ರಂಗ ತಂಡ ಆಯೋಜಿಸಿದ ಈ ಉತ್ಸವದಲ್ಲಿನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆಎಂದು ರಂಗ ತಂಡದ ಖಜಾಂಚಿ ಚೇತನ್ ಸಿ.ರಾಯನಹಳ್ಳಿಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಬಾರಿಗೆ ಮಹಿಳೆಯರುಮತ್ತು ಮಕ್ಕಳ ವರ್ತಮಾನದ ತಲ್ಲಣಗಳು ಎಂಬ ವಿಷಯದ ಆಧಾರದ ಮೇಲೆ ಎರಡು ದಿನದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ನ.16 ರಂದು ಸಂಜೆ 6.30ಕ್ಕೆ ಸರ್ಜಿ ಆಸ್ಪತ್ರೆ ವೈದ್ಯಡಾ.ಧನಂಜಯ ಸರ್ಜಿ ನಾಟಕೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮುಖ್ಯ ಶಿಕ್ಷಕಎಸ್.ಟಿ.ಶ್ರೀನಿವಾಸ ವರ್ಮ, ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿಭಾಗವಹಿಸುವರುನ.17ರ ಸಂಜೆ 6.30ಕ್ಕೆ ಸಮಾರೋಪ.ಮಾನಸ ಸಮೂಹ ಸಂಸ್ಥೆಯ ಡಾ.ರಜನಿ ಪೈ, ವಕೀಲರಾದ ಪ್ರೇಮಾ, ಉಪನ್ಯಾಸಕರಾದ ಡಾ.ಮೈತ್ರೇಯಿ ಆದಿತ್ಯ ಪ್ರಸಾದ್, ನಮ್ಮ ಹಳ್ಳಿ ಥಿಯೇಟರ್ಸ್ಅಧ್ಯಕ್ಷ ಪ್ರವೀಣ್ ಎಸ್.ಹಾಲ್ಮತ್ತೂರು ಭಾಗವಹಿಸುವರು ಎಂದರು.

16ರಂದು 10ನೇ ತರಗತಿಯ ಪಠ್ಯಾಧಾರಿತ ರಾಯನಹಳ್ಳಿ ನಿರ್ದೇಶನದ, ಕೃಷ್ಣ ಭಾರತ ಮತ್ತು ನಮ್ಮ ಹೋರಾಟ ನಾಟಕಗಳು ಪ್ರದರ್ಶನಗೊಳ್ಳಲಿವೆ. 17 ರಂದು ಎರಡು ಮಹಿಳಾ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಹೋರಾಟಗಾರ್ತಿದು.ಸರಸ್ವತಿ ಅಭಿನಯದ ‘ಸಣ್ತಿಮ್ಮಿ ಲವ್ ಪುರಾಣ’ ಮತ್ತು ವಾಣಿ ಪೆರಿಯೋಡಿ ಅಭಿನಯದ ‘ಕೌದಿ ಬದುಕಿನ ಹೆಣಿಗೆ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ಉಚಿತ ಪ್ರವೇಶವಾಗಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಹಳ್ಳಿ ಥಿಯೇಟರ್ಸ್ ಮುಖ್ಯಸ್ಥ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.