ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಆವರಣದ ಸೂಪರ್ ಸ್ಪೆಷಾಲಿಟಿಕಟ್ಟಡವನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆಗೊಳಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಒತ್ತಾಯಿಸಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿವಿಧ ಚಿಕಿತ್ಸೆಗಳನ್ನು ರೋಗಿಗಳಿಗೆ ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆಸ್ಪತ್ರೆಗೆ ಅಂದು₨ 35.08 ಕೋಟಿ ಬಿಡುಗಡೆ ಮಾಡಲಾಗಿತ್ತು.ಮೂರು ಹಂತದ ಕಾಮಗಾರಿ ಮುಗಿದುಐದುವರ್ಷಗಳಾಗಿವೆ.2ನೇ ಹಂತದ ಕಾಮಗಾರಿಗೆ ₨6.36 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.ತುರ್ತುಚಿಕಿತ್ಸಾ ವಿಭಾಗಕ್ಕೆ ₨6 ಕೋಟಿ ಉಪಕರಣ ಖರೀದಿಸಲಾಗಿದೆ. ಮತ್ತೆ ನವೀಕರಣಕ್ಕಾಗಿ ₨ 1.81 ಕೋಟಿ ವೆಚ್ಚ ಮಾಡಲಾಗಿದೆ. ಇಷ್ಟಾದರೂ ಆಸ್ಪತ್ರೆ ಲೋಕಾರ್ಪಣೆಗೊಂಡಿಲ್ಲ ಎಂದು ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗಮನಹರಿಸಬೇಕು. ಸಿಮ್ಸ್ ಆಡಳಿತ ಮಂಡಳಿ ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ ವಿನಾಕಾರಣ ಆಸ್ಪತ್ರೆ ಉದ್ಘಾಟನೆ ಮುಂದೂಡುತ್ತಿದೆ. ಜ.31ರ ಒಳಗೆ ಉದ್ಘಾಟನೆಮಾಡದಿದ್ದರೆ ಸಂಘಟನೆವತಿಯಿಂದ ಉದ್ಘಾಟಿಸಲಾಗುತ್ತದೆ ಎಂದುಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಮುಖ್ಯಸ್ಥರಾದ ಜಿ.ಮಾದಪ್ಪ, ಎಚ್.ಎಂ.ಗಂಗಯ್ಯ, ಶಂಕ್ರಾನಾಯ್ಕ, ರೇಖ್ಯಾನಾಯ್ಕ, ಕೋಡ್ಲು ಶ್ರೀಧರ್, ಸೋಮಯ್ಯಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.