ತೀರ್ಥಹಳ್ಳಿ: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಜನ್ಮಶತಾಬ್ದಿ ಅಂಗವಾಗಿ ಅವರ ಹುಟ್ಟೂರು ಶಾಂತವೇರಿಯಿಂದ ಬೆಂಗಳೂರಿಗೆ ಶನಿವಾರ ಜಾಥಾ ಹೊರಟಿತು.

ಜನ್ಮಶತಾಬ್ದಿ ಜಾಥಾ ಸಮಿತಿಯ ಸದಸ್ಯರು, ಶಾಂತವೇರಿಯ ಮಣ್ಣು ತೆಗೆದುಕೊಂಡು ಬೆಂಗಳೂರಿಗೆ ಹೊರಟರು. ಈ ಮಣ್ಣನ್ನುಬೆಂಗಳೂರಿನ ಗಾಂಧಿಭವನ ಆವರಣದ ಗಿಡಗಳಿಗೆ ಭಾನುವಾರ (ಆ.21)ಸಮರ್ಪಿಸಲಾಗುತ್ತದೆ.

ಅವರ ಜನ್ಮಸ್ಥಳ ಅಭಿವೃದ್ಧಿ ಪಡಿಸುವ ಬೇಡಿಕೆಯೊಂದಿಗೆ ಜಾಥಾ ನಡೆಯುತ್ತಿದೆ.ಜಾಥಾ ಶಿವಮೊಗ್ಗ, ಭದ್ರಾವತಿ, ತರೀಕರೆ, ಅರಸೀಕೆರೆ, ಗುಬ್ಬಿ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧಿ ಭವನ ತಲುಪಲಿದೆ. ಜನ್ಮಶತಾಬ್ದಿ ಜಾಥಾ ಸಮಿತಿ ಸಂಚಾಲಕರಾದ ಎನ್.ಶಿವಾನಂದ ಕುಗ್ವೆ, ಎನ್.ಡಿ. ವಸಂತ್ ಕುಮಾರ್ ನೇತೃತ್ವ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.