ಶಿವಮೊಗ್ಗ: ಸಮೀಪದ ಸೋಮಿನಕೊಪ್ಪ ಬಳಿಯ ಮೋಜಪ್ಪ ಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕೋಳಿ ಫಾರಂ ಛಾವಣಿ ಸಮೇತ ಶುಕ್ರವಾರ ಕುಸಿದು ಬಿದ್ದಿದೆ.

ಕುಸಿದು ಬಿದ್ದ ಕೋಳಿ ಫಾರಂ ಅವಶೇಷಗಳ ಅಡಿ ಸಿಲುಕಿ ಐದು ಸಾವಿರಕ್ಕೂ ಹೆಚ್ಚಿನ ಕೋಳಿಗಳು ಸಾವಿಗೀಡಾಗಿವೆ.

ಗ್ರಾಮದ ಇಮ್ತಿಯಾಝ್ ಅಹಮದ್ ಎಂಬುವವರಿಗೆ ಈ ಕೋಳಿ ಫಾರಂ ಸೇರಿದೆ. ಸುಮಾರು 6500ಕ್ಕೂ ಹೆಚ್ಚಿನ ಕೋಳಿಗಳ ಸಾಕಾಣಿಕೆ ಇಲ್ಲಿ ಮಾಡಲಾಗಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಕೋಳಿ ಫಾರಂನ ಶೆಡ್ ಸಂಪೂರ್ಣ ಕುಸಿದು ಬಿದ್ದಿದೆ. ಲಕ್ಷಾಂತರ ರೂಪಾಯಿ ಮೊತ್ತದ ಹಾನಿ ಸಂಭವಿಸಿದೆ. ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.