ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್.ಚಂದ್ವಾನಿ ಅವರು ನೇಮಕವಾಗಿದ್ದು, ಗುರುವಾರ ಪ್ರಭಾರಿ ಅಧಿಕಾರಿ ಸುರಜೀತ್ ಮಿಶ್ರಾ ಅವರಿಂದ ಅಧಿಕಾರ ಸ್ವೀಕರಿಸಿದರು.

ಮಧ್ಯಪ್ರದೇಶ ರಾಜ್ಯದ ಭಿಲಾಯ್ ಸಮೀಪದ ಕುಟೀಲಭತ್ತದಲ್ಲಿ ಜನಿಸಿದ ಚಂದ್ವಾನಿ 1988ರಲ್ಲಿ ಭೋಪಾಲ್ ಮೌಲಾನ ಆಜಾದ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. 1989ರಲ್ಲಿ ಭಿಲಾಯ್ ಸ್ಟೀಲ್ ಪ್ಲಾಂಟ್ ಎಂಜಿನಿಯರ್ ಆಗಿ ಸೇರ್ಪಡೆಗೊಂಡರು.

ಭಿಲಾಯ್ ಸ್ಟೀಲ್ ಪ್ಲಾಂಟ್ ಕೋಕ್ ಓಪನ್, ಸ್ಟೀಲ್ ಮೇಕಿಂಗ್ ಷಾಪ್, ಮೈನ್ಸ್, ಬ್ಲಾಸ್ಟ್ ಫರ್ನೇಸ್ ಮೆಕಾನಿಕಲ್ ವಿಭಾಗದ ಅದಿರು ನಿರ್ವಹಣೆ ಸ್ಥಾವರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಇವರು 2015ರಲ್ಲಿ ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆದಿದ್ದಾರೆ.

2013ರಲ್ಲಿ ಭಿಲಾಯ್ ಸ್ಟೀಲ್ ಪ್ಲಾಂಟ್ ಮಟ್ಟದ ‘ಜವಹರಲಾಲ್ ಪ್ರಶಸ್ತಿ, 1997 ಮತ್ತು 1998ರಲ್ಲಿ ಎರಡು ಬಾರಿ ‘ರಾಷ್ಟ್ರೀಯ ವಿಶ್ವಕರ್ಮ ಪ್ರಶಸ್ತಿ ಪಡೆದಿದ್ದಾರೆ.

ಕ್ರಿಕೆಟ್ ಆಡುವುದು, ಹಿಂದಿ ಸಂಗೀತ ಕೇಳುವುದು ಹಾಗೂ ಹಾಡುವ ಹವ್ಯಾಸ ಹೊಂದಿರುವ ಅವರು ಹಿಂದಿ, ಇಂಗ್ಲಿಷ್, ಛತ್ತೀಸಗಡಿ ಭಾಷೆಯಲ್ಲಿ ಪರಿಣತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.