ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿ ಸಣ್ಣೇನಹಳ್ಳಿ ಸೆಂಟ್ ಜೋಸೆಫ್ ಪಬ್ಲಿಕ್ ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ನಡೆಯಿತು.

ಕಂಪಾರಹಳ್ಳಿ ಕ್ಲಸ್ಟರ್ ಶಾಲೆ ವಿದ್ಯಾರ್ಥಿಗಳು ಮತ್ತು ದಾಸಪುರ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು, ಬಿಟಿಎಸ್, ಸಣ್ಣೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ 700 ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕ್ರಿಯಾತ್ಮಕ ಆಲೋಚನೆಯಿಂದ ಉತ್ತಮ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ವಿಜ್ಞಾನ, ಚಂದ್ರಯಾನ-3, ಕೃಷಿ ಉಪಕರಣ, ಚಂದ್ರಯಾನ-3, ಜಲವಿದ್ಯುತ್ ಅಣೆಕಟ್ಟು, ಭೂಶಾಖದ ವಿದ್ಯುತ್ ಸ್ಥಾವರ, ವಿಜ್ಞಾನಿ ಪ್ರಶಸ್ತಿ ಜೂನಿಯರ್ ಪ್ರಯೋಗ, ಹೃದಯದ ಕಾರ್ಯನಿರ್ವಹಣೆ, ಹೈಡ್ರೋಜನಿಕ್ ಸೇತುವೆ, ಸಮಾಜ ವಿಜ್ಞಾನ, ಅಣೆಕಟ್ಟು, ಜ್ವಾಲಾಮುಖಿ ಸ್ಫೋಟ, ಕ್ಷೀರಪಥ, ಜಾಗತಿಕ ತಾಪಮಾನ, ಭಾರತದ ಭೌತಿಕ ಭವಿಷ್ಯ, ಕೃಷಿ ಮಾದರಿ, ಇಂಗ್ಲಿಷ್, ಟೈಟಾನಿಕ್, ಲೇಖನ, ನಾಮಪದದ ವಿಧಗಳು, ಮಾತಿನ ಭಾಗ, ಪೂರ್ವಭಾವಿ, ಕನ್ನಡ, ರಾಷ್ಟ್ರಕವಿಗಳು ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರು, ಸಾಲುಮರದ ತಿಮ್ಮಕ್ಕ, ಹಂಪೆಯ ಕಲ್ಲಿನ ರಥ, ಕುವೆಂಪು ಮನೆ, ಕರ್ನಾಟಕದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು, ಹಿಂದಿ ಕಥೆಗಳು, ರಮಣೀಯ ಭಾಗ, ಹಿಂದಿ ವ್ಯಾಕರಣ ಪದ, ತಾಜ್ ಮಹಲ್, ಪತ್ರಗಳ ಚಿತ್ರ, ಗಣಿತಶಾಸ್ತ್ರ, ತ್ರಿಕೋನಮಿತಿಯ ಉದ್ಯಾನ, ಕ್ವಾಡ್ರಿ ಲ್ಯಾಟರಲ್ ಮಾದರಿ, ವೃತ್ತ ಮತ್ತು ಅದರ ಭಾಗ, ಪೈಥಾಗೊರಸ್ ಮಾದರಿ, ಜ್ಯಾಮಿತಿ ಪಾರ್ಕ್, ವಿಭಾಗ ಯಂತ್ರ ಮಾದರಿಯಲ್ಲಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನದ ಮಾದರಿ ರಚಿಸಿದ್ದರು.

ಕಂಪಾರಹಳ್ಳಿ ಮೊರಾರ್ಜಿ ವಸತಿ ಶಾಲೆ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ವರದಾನಿ, ಸಣ್ಣೇನಹಳ್ಳಿ ಧರ್ಮ ಕೇಂದ್ರದ ಗುರು, ಸೇಂಟ್ ಜೋಸೆಫ್ ಶಾಲೆ ವ್ಯವಸ್ಥಾಪಕ ಒಂದನೇ ಫಾದರ್ ಮಾರಿಯೊ ಫರ್ನಾಂಡಿಸ್, ಫಾದರ್ ವಿಲಿಯಂ ಪ್ರಭು, ಶಿಕ್ಷಕರ ಪ್ರತಿನಿಧಿ ಬಾಲರಾಜ್ ಪ್ರಕಾಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಿಂಚನ ಮತ್ತು ಯಶಸ್ ಗೌಡ, ಸೇಂಟ್ ಜೋಸೆಫ್ ಪಬ್ಲಿಕ್ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ನಿಶಾಂತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.