ತುಮಕೂರು: ನಗರದ ಹೊರ ವಲಯದ ಗೂಳೂರಿನಲ್ಲಿ ಬುಧವಾರ ಸಂಜೆ ಕುಣಿಗಲ್‌ನಿಂದ ತುಮಕೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಬಾತ್ ರೂಮ್ ಸ್ವಚ್ಛಗೊಳಿಸಲು ಬಳಸುವ ಆ್ಯಸಿಡ್ ಸಿಡಿದು ಮೂವರು ಗಾಯಗೊಂಡಿದ್ದಾರೆ.

ನಗರದ ಜನತಾ ಕಾಲೊನಿ ನಿವಾಸಿಗಳಾದ ಶಕಿಲಾ ಬಾನು, ನಾಜಿಯಾ ಬಾನು, ತಾಲ್ಲೂಕಿನ ಬಳಗೆರೆ ಗ್ರಾಮದ ರಾಜಲಕ್ಷ್ಮಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಕಿಲಾ ಬಾನು ಎಂಬುವರು ಆ್ಯಸಿಡ್ ಅನ್ನು ನೀರಿನ ಬಾಟಲಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಬಸ್ ಹೋಗುವಾಗ ಅದು ಕೆಳಗೆ ಬಿದ್ದು, ಅಕ್ಕಪಕ್ಕದಲ್ಲಿದ್ದ ಮಹಿಳೆಯರ ಮೇಲೆ ಸಿಡಿದಿದೆ.

ಮಹಿಳೆಯರ ಮುಖ, ಕೈ, ಕಾಲುಗಳ ಬಳಿ ಸುಟ್ಟ ಗಾಯಗಳಾಗಿವೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅಪಘಾತ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾರಿಗೂ ಹೆಚ್ಚಿನ ಹಾನಿಯಾಗಿಲ್ಲ. ಆ್ಯಸಿಡ್ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಹೊನ್ನುಡಿಕೆ ಬಳಿಯ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಆ್ಯಸಿಡ್ ತಂದಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.
ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.