ತಾಲ್ಲೂಕಿನಲ್ಲಿ ಮುಚ್ಚಿರುವ ಶಾಲೆಗಳಲ್ಲಿ ದನಕರು ಕಟ್ಟುವುದು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆ. ಕುಡುಕರು ಜೂಜುಕೋರರ ಅಡ್ಡೆಗಳಾಗಿ ಸರ್ಕಾರದ ಆಸ್ತಿ ಹಾಳಾಗುತ್ತಿದೆ. ಎಲ್ಲವನ್ನೂ ಸರ್ಕಾರ ಸುಪರ್ದಿಗೆ ತೆಗೆದುಕೊಂಡು ರಕ್ಷಿಸಬೇಕು. ಜಿಲ್ಲಾ ಉಪನಿರ್ದೇಶಕರು ಬಿಇಒ ಬಿಆರ್‌ಪಿ ಸಿಆರ್‌ಪಿ ಶಿಕ್ಷಕರು ಮುಚ್ಚಿರುವ ಶಾಲೆಗಳನ್ನು ತೆರೆಯಲು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಬೇಕು. ಸಿದ್ದಲಿಂಗೇಗೌಡ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಮುಚ್ಚಿರುವ ಶಾಲೆ ತೆರೆಯಲಿ ಕಡಿಮೆ ಮಕ್ಕಳಿವೆ ಎಂಬ ಕಾರಣಕ್ಕೆ ಶಾಲೆಗೆ ಶಿಕ್ಷಕರನ್ನು ಸರ್ಕಾರ ನೇಮಿಸದ ಕಾರಣ ಗ್ರಾಮದಲ್ಲಿನ ಶಾಲೆ ಮುಚ್ಚಿ ವರ್ಷವಾಗಿದೆ. ಇಲ್ಲಿರುವ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳು ಕಿರಿಯ ಪ್ರಾಥಮಿಕ ಶಾಲೆಗೆ ಏಳೆಂಟು ಕಿ.ಮೀ ದೂರದ ಮಾಯಸಂದ್ರ ಅಥವಾ ಮಾವಿನಿಕೆರೆ ಶಾಲೆಗೆ ಹೋಗಬೇಕಿದೆ. ಗ್ರಾಮದ ಮಕ್ಕಳ ಹಿತದೃಷ್ಟಿಯಿಂದ ಮುಚ್ಚಿರುವ ಶಾಲೆ ಮತ್ತೆ ತೆರೆಯಲಿ. ಅಶೋಕ ಬ್ಯಾಡರಹಳ್ಳಿ ಅಂಗನವಾಡಿ ಗ್ರಂಥಾಲಯಕ್ಕೆ ಬಳಕೆ ಮಕ್ಕಳ ಕೊರತೆಯ ಕಾರಣದಿಂದ ತಾತ್ಕಾಲಿಕವಾಗಿ ಮುಚ್ಚಿದ ಶಾಲೆಗಳನ್ನು ಮುಂದಿನ ದಿನಗಳಲ್ಲಿ ತೆರೆಯಲಾಗುವುದು. ಮುಚ್ಚಿರುವ ಶಾಲೆಗಳ ವಸ್ತುಸ್ಥಿತಿ ಬಗ್ಗೆ ಸಿಆರ್‌ಪಿಗಳ ಮೂಲಕ ಮಾಹಿತಿ ಪಡೆದು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಂಗನವಾಡಿ ಗ್ರಂಥಾಲಯಕ್ಕೆ ಬಳಸಲು ಅವಕಾಶ ನೀಡುವುದರ ಮೂಲಕ ಶಾಲೆ ಆಸ್ತಿ ರಕ್ಷಿಸಲಾಗುವುದು. ಎನ್.ಸೋಮಶೇಖರ್ ಬಿಇಒ