ಕೊರಟಗೆರೆ: ತಾಲ್ಲೂಕಿನ ತುಂಬಾಡಿ ಕೆರೆಯನ್ನು ನೋಡಲು ಹೋಗಿದ್ದ ತಂದೆ, ಮಗಳು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಬೆಂಗಳೂರು ಶಿವಾಜಿ ನಗರದ ಫಿರ್ದೋಸ್ (45), ಮಗಳು ಆಯ್ಮಾ (6) ಮೃತರು. ಸೋಮವಾರ ಪಟ್ಟಣದ ಗಿರಿನಗರದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಕುಟುಂಬ ಸಮೇತ ಸಂಜೆ ಕೆರೆ ವೀಕ್ಷಿಸಲು ಹೋಗಿದ್ದಾರೆ. ಈ ವೇಳೆ ಮಗಳು ಆಯ್ಮಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಮಗಳನ್ನು ರಕ್ಷಿಸಲು ತಂದೆ ಫಿರ್ದೋಸ್ ನೀರಿಗಿಳಿದಿದ್ದಾರೆ. ಈ ವೇಳೆ ಇಬ್ಬರೂ ನೀರಲ್ಲಿ ಮುಳುಗುವುದನ್ನು ಕಂಡ ಫಿರ್ದೋಸ್ ಪತ್ನಿ ಕೂಡ ನೀರಿಗಿಳಿದಿದ್ದಾರೆ.

ಈಜು ಬಾರದೆ ಮೂವರು ನೀರಲ್ಲಿ ಮುಳುಗಿದ್ದಾರೆ. ಫಿರ್ದೋಸ್ ಪತ್ನಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ತಹಶೀಲ್ದಾರ್ ಕೆ.ಮಂಜುನಾಥ್, ಸಿಪಿಐ ಆರ್.ಪಿ.ಅನಿಲ್, ಪಿಎಸ್ಐ ಜಿ.ಚೇತನ್ ಕುಮಾರ್ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.