ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಬ್ಯಾಂಕಿನ ನೌಕರರ ಯೂನಿಯನ್ ನೇತೃತ್ವದಲ್ಲಿ ನೌಕರರು ಸೋಮವಾರ ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ...ದೇವೇಗೌಡರ ಸೋಲೂ; ಸೂಪರ್ ಸೀಡ್ ರಾಜಕಾರಣವೂ

ಯೂನಿಯನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ' ನಮ್ಮ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅಕ್ರಮಗಳು ನಡೆದಿಲ್ಲ. ವಿನಾಕಾರಣ ಸೂಪರ್ ಸೀಡ್ ಮಾಡಲಾಗಿದೆ. ರಾಜಕೀಯ ದ್ವೇಷದಿಂದ ಸೂಪರ್ ಸೀಡ್ ಮಾಡಲಾಗಿದೆ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು. ಆಡಳಿತ ಮಂಡಳಿಗೆ ಮತ್ತೆ ಅಧಿಕಾರವಹಿಸಿಕೊಡಬೇಕು ಎಂದು ಒತ್ತಾಯ ಮಾಡಿದರು.

ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಪ್ರತಿಭಟಿಸಲಾಗುತ್ತಿದೆ. ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಹದಿನೈದು ವರ್ಷದಲ್ಲಿ ಇಡೀ ರಾಜ್ಯದಲ್ಲಿಯೇ ಯಾವ ಡಿಸಿಸಿ ಬ್ಯಾಂಕ್ ಮಾಡದ ಸಾಧನೆಯನ್ನು ನಮ್ಮ ಡಿಸಿಸಿ ಬ್ಯಾಂಕ್ ಮಾಡಿದೆ. ರೈತರು, ಬಡವರು, ಅಸಹಾಯಕರು, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮಾಡಿ ಏಳಿಗೆಗೆ ಸಹಕಾರಿಯಾಗಿದೆ. ನಿವೃತ್ತ ನೌಕರರ ಹಿತರಕ್ಷಣೆಗೆ ವಾರ್ಷಿಕ ₹ 35 ಲಕ್ಷ ಕಾಯ್ದಿರಿಸಿ ತನ್ನದೇ ಆದ ವಿಶೇಷ ಯೋಜನೆ ಮೂಲಕ ಬ್ಯಾಂಕಿನ ಆಡಳಿತ ಮಂಡಳಿ ನೆರವಾಗಿದೆ. ಇದನ್ನು ಸಹಿಸದೇ ರಾಜಕೀಯ ಕಾರಣಕ್ಕೆ ಸೂಪರ್ ಸೀಡ್ ಮಾಡಲಾಗಿದೆ ಎಂದು ಆರೋಪಿಸಿದರು.

ಇನ್ನಷ್ಟು...

ರೇವಣ್ಣ, ಪರಮೇಶ್ವರ ಅವರ ಹತ್ತಾರು ಅಕ್ರಮ ಬಯಲು ಮಾಡುವೆ: ಕೆ.ಎನ್.ರಾಜಣ್ಣ

ರಾಜಕೀಯ ಸೇಡಿನಿಂದ ಬ್ಯಾಂಕ್ ಸೂಪರ್ಸೀಡ್: ದೇವೇಗೌಡ ವಿರುದ್ಧ ರಾಜಣ್ಣ ಆರೋಪ

ಚುನಾವಣೆಗೆ ಸ್ಪರ್ಧಿಸಲ್ಲ: ಕೆ.ಎನ್.ರಾಜಣ್ಣ ಘೋಷಣೆ

ಮೈತ್ರಿ ಸರ್ಕಾರ ಬಿದ್ದರೆ ಮತ್ತೆ ಅಧ್ಯಕ್ಷ: ಕೆ.ಎನ್.ರಾಜಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.