ತುಮಕೂರು: ತಾಲ್ಲೂಕಿನ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಫೋಟೊ ತೆಗೆಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹಂಸಾ ಎಸ್.ಗೌಡ (20) ಅವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಕೋಡಿಯಿಂದ 15ರಿಂದ 20 ಅಡಿ ಆಳದಲ್ಲಿರುವ ಬಂಡೆಯ ಮಧ್ಯೆ ಸಿಲುಕಿದ್ದ ಹಂಸಾ, ಕೊಚ್ಚಿ ಹೋಗಿ 20 ತಾಸುಗಳ ನಂತರ ಜೀವಂತವಾಗಿ ಹೊರ ಬಂದಿದ್ದಾರೆ.

ಭಾನುವಾರ ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಗ್ನಿ ಶಾಮಕದಳದ ಸಿಬ್ಬಂದಿ ಕತ್ತಲಾದ ನಂತರ ಹುಡುಕಾಟ ಸ್ಥಗಿತಗೊಳಿಸಿದ್ದರು. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತ್ತೆ ಹುಡುಕಾಟ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ರಕ್ಷಿಸಿ ಹೊರತಂದರು.

‘ಹೋಯ್ತು ಜೀವ ಅನ್ಕೊಂಡೆ. ಪುಣ್ಯಕ್ಕೆ ಬಂಡೆ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಪ್ರಾಣ ಉಳಿಯಿತು. ಯಾರಾದರೂ ಬಂದು ಕಾಪಾಡ್ತಾರೆ ಅನ್ನೋ ನಂಬಿಕೆ ಇತ್ತು. ಮುಂದೆ, ಹಿಂದೆ ಸುತ್ತಲೂ ಬಂಡೆಗಳಿದ್ದವು. ಕಾಲು ಕೆಳಗೆ ನೀರು ಹರಿಯುತ್ತಿತ್ತು. ಇಡೀ ರಾತ್ರಿ ಮಂಡಿಯೂರಿ ಕೂತಿದ್ದೆ’ ಎಂದು ಹಂಸಾ ಬದುಕಿ ಬಂದ ಬಗೆಯನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.