ತುಮಕೂರು: ಏರಿಳಿತ ಕಾಣುತ್ತಿರುವ ಟೊಮೆಟೊ ಬೆಲೆ ಈ ವಾರ ಮತ್ತೆ ಇಳಿಕೆಯತ್ತ ಸಾಗಿದ್ದು, ಹುಣಸೆ ಹಣ್ಣು ಮತ್ತಷ್ಟು ದುಬಾರಿಯಾಗಿದೆ. ತರಕಾರಿ, ಸೊಪ್ಪು ದರ ಕಡಿಮೆಯಾಗಿದ್ದು, ಹಣ್ಣಿನ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಟೊಮೆಟೊ ಇಳಿಕೆ: ಹಿಂದಿನ ವಾರ ಟೊಮೆಟೊ ಕೆ.ಜಿ ₹120ರ ವರೆಗೂ ಏರಿಕೆಯಾಗಿದ್ದು, ಈ ವಾರ ಕೆ.ಜಿ ₹70–80ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಆವಕ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ದರ ಕಡಿಮೆಯಾಗಬಹುದು ಎಂದು ಅಂತರಸನಹಳ್ಳಿ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಹಸಿರು ಮೆಣಸಿನ ಕಾಯಿ ಧಾರಣೆ ಕಡಿಮೆಯಾಗುತ್ತಿದ್ದು, ಈ ವಾರ ಮತ್ತಷ್ಟು ತಗ್ಗಿದೆ. ತೊಂಡೆಕಾಯಿ, ಬೆಂಡೆಕಾಯಿ, ಹಾಗಲಕಾಯಿ ತುಸು ಏರಿಕೆ ಕಂಡಿದ್ದರೆ, ಇತರೆ ತರಕಾರಿಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಶುಂಠಿ ಬೆಲೆ ನಿಧಾನವಾಗಿ ಕಡಿಮೆಯಾಗುವಂತೆ ಕಾಣುತ್ತಿದ್ದು, ಸೌತೆಕಾಯಿ ದರ ಮತ್ತೂ ಕಡಿಮೆಯಾಗಿದೆ.

ಸೊಪ್ಪು ಕೇಳುವವರಿಲ್ಲ: ಸೊಪ್ಪಿನ ಬೆಲೆ ಚೇತರಿಸುವಂತೆ ಕಾಣುತ್ತಿಲ್ಲ. ಮಾರುಕಟ್ಟೆಯಲ್ಲಿ ಸೊಪ್ಪು ಕೇಳುವವರೇ ಇಲ್ಲವಾಗಿದ್ದು, ದರ ಕುಸಿಯುತ್ತಲೇ ಇದೆ. ಪಾಲಕ್ ಸೊಪ್ಪು ಬಿಟ್ಟರೆ ಇತರೆ ಸೊಪ್ಪಿನ ಬೆಲೆ ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹15–20, ಸಬ್ಬಕ್ಕಿ ಕೆ.ಜಿ ₹20, ಮೆಂತ್ಯ ಕೆ.ಜಿ ₹30, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಸೇಬು ದುಬಾರಿ: ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಸೇಬು ಹಣ್ಣಿನ ದರ ನಿಧಾನವಾಗಿ ಏರುತ್ತಲೇ ಸಾಗಿದೆ. ದಾಳಿಂಬೆ ಹಣ್ಣು ಸ್ವಲ್ಪ ಅಗ್ಗವಾಗಿದ್ದರೆ, ಸೀಬೆ ಹಣ್ಣು ಮಾರುಕಟ್ಟೆಗೆ ಬರಲು ಆರಂಭವಾಗಿದ್ದು, ಧಾರಣೆ ಕಡಿಮೆಯಾಗುತ್ತಿದೆ. ಇತರೆ ಹಣ್ಣುಗಳ ದರ ಯಥಾಸ್ಥಿತಿ ಮುಂದುವರಿದಿದ್ದು, ಮುಂದಿನ ವಾರಗಳಲ್ಲಿ ಕಡಿಮೆಯಾಗಬಹುದು ಎಂದು ಹಣ್ಣು ವ್ಯಾಪಾರಿಗಳು ಹೇಳುತ್ತಾರೆ.

ಕರಿಮೆಣಸಿಗೆ ಬೇಡಿಕೆ: ಕಳೆದ ಕೆಲವು ತಿಂಗಳಿಂದ ಗಗನಮುಖಿಯಾಗಿರುವ ಕಪ್ಪು ಮೆಣಸು ಧಾರಣೆ ಈ ವಾರ ದಾಖಲೆಯ ಮಟ್ಟಕ್ಕೆ ಜಿಗಿದಿದೆ. ಕೆ.ಜಿ ₹600 ಆಸುಪಾಸಿನಲ್ಲಿದ್ದ ಮೆಣಸು, ಈಗ ₹700 ಗಡಿಗೆ ಬಂದು ನಿಂತಿದೆ. ಲವಂಗ, ಗಸಗಸೆ, ಬಾದಾಮಿ, ದ್ರಾಕ್ಷಿ ದರವೂ ತುಸು ಏರಿಕೆಯಾಗಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಕೆಲವು ಎಣ್ಣೆ ದರ ಏರಿಕೆಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹113, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹152–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಹುಣಸೆ ಹಣ್ಣು ದುಬಾರಿ: ಟೊಮೆಟೊ ದುಬಾರಿಯಾಗಿದ್ದು, ಪರ್ಯಾಯವಾಗಿ ಹುಣಸೆ ಹಣ್ಣು ಬಳಕೆ ಹೆಚ್ಚಾಗಿದ್ದು, ಬೆಲೆ ಸಹ ಗಗನಮುಖಿಯಾಗಿದೆ. ಕೆ.ಜಿ ₹100–120 ಇದ್ದದ್ದು, ಈಗ ₹180ರ ವರೆಗೂ ಹೆಚ್ಚಳವಾಗಿದೆ. ಚಿಲ್ಲರೆಯಾಗಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಇಳಿಯದಿದ್ದರೆ ಹುಣಸೆ ಹಣ್ಣಿನ ದರ ಮತ್ತಷ್ಟು ಏರಿಕೆಯಾಗಲಿದೆ.

ತೊಗರಿ ಬೇಳೆ ಮತ್ತೆ ಏರಿಕೆಯತ್ತ ಮುಖ ಮಾಡಿದ್ದು, ಬಟಾಣಿ ದರ ಸಹ ಹೆಚ್ಚಳವಾಗಿದೆ. ಅಲಸಂದೆ, ಹುರುಳಿಕಾಳು ಬೆಲೆ ಏರಿಕೆಯತ್ತ ಸಾಗಿದೆ.

ಧನ್ಯ ಕೆ.ಜಿ ₹100–140, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹420–600, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹265–270, ಹುಣಸೆಹಣ್ಣು ₹120–180, ಕರಿಮೆಣಸು ಕೆ.ಜಿ ₹650–700, ಜೀರಿಗೆ ಕೆ.ಜಿ ₹700–720, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–100, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹1,050–1,100, ಗುಣಮಟ್ಟದ ಗಸಗಸೆ ಕೆ.ಜಿ ₹1,350–1,400, ಬಾದಾಮಿ ಕೆ.ಜಿ ₹660–680, ಗೋಡಂಬಿ ಕೆ.ಜಿ ₹640–700, ದ್ರಾಕ್ಷಿ ಕೆ.ಜಿ ₹200–210ಕ್ಕೆ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಹಿಂದಿನ ವಾರ ಹೆಚ್ಚಳವಾಗಿದ್ದ ಕೋಳಿ ಮಾಂಸದ ಬೆಲೆ ಈ ವಾರ ಸ್ವಲ್ಪ ಕಡಿಮೆಯಾಗಿದೆ. ಕೆ.ಜಿಗೆ ₹10ರಿಂದ 20 ಇಳಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿಕೆಯಾಗಿದೆ.

ಮೀನು ದುಬಾರಿ: ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಆರಂಭವಾಗಿದ್ದು, ಮಾರುಕಟ್ಟೆಗೆ ಬರಲಾರಂಭಿಸಿದ್ದು ಬೆಲೆ ದುಬಾರಿಯಾಗಿದೆ. ಬಂಗುಡೆ ಕೆ.ಜಿ ₹410, ಬೂತಾಯಿ ಕೆ.ಜಿ ₹230, ಬೊಳಿಂಜರ್ ₹550, ಅಂಜಲ್ ಕೆ.ಜಿ ₹1,320, ಬಿಳಿ ಮಾಂಜಿ ಕೆ.ಜಿ 1,020, ಕಪ್ಪುಮಾಂಜಿ ಕೆ.ಜಿ ₹910, ಸೀಗಡಿ ಕೆ.ಜಿ ₹650, ಏಡಿ ಕೆ.ಜಿ ₹510ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪಟ್ಟಿ.....

ಹಣ್ಣು (ಬೆಲೆ ಕೆ.ಜಿ ₹)

ಸೇಬು;240–280

ದಾಳಿಂಬೆ;160–180

ಮೂಸಂಬಿ;80–100

ಕಿತ್ತಳೆ;160

ಸಪೋಟ;160

ಏಲಕ್ಕಿ ಬಾಳೆ;75–80

ಪಚ್ಚಬಾಳೆ;45–50

ಪಪ್ಪಾಯ;40

ಸೀಬೆ;80–100

ಪೈನಾಪಲ್;80

ಕರಬೂಜ;60

ಕಲ್ಲಂಗಡಿ;40

ದ್ರಾಕ್ಷಿ;150–160

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;135–150

ಕಡಲೆ ಬೇಳೆ;65–70

ಉದ್ದಿನ ಬೇಳೆ;130–140

ಹೆಸರು ಬೇಳೆ;105–110

ಕಡಲೆಕಾಳು;62–65

ಹೆಸರು ಕಾಳು;110–115

ಅಲಸಂದೆ;100–110

ಅವರೆಕಾಳು;150–160

ಅವರೆಬೇಳೆ;195–200

ಹುರುಳಿಕಾಳು;90–100

ಹುರಿಗಡಲೆ;80–85

ಬಟಾಣಿ;80–85

ಕಡಲೆ ಬೀಜ;140–150

ಗೋಧಿ;34–38

ಸಕ್ಕರೆ;39–40

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;30–40

ಕ್ಯಾರೇಟ್;30–40

ಬೀಟ್ರೂಟ್;25–30

ಈರುಳ್ಳಿ;20–25

ಟೊಮೆಟೊ;70–80

ಆಲೂಗಡ್ಡೆ;25–30

ಗೆಡ್ಡೆಕೋಸು;25–30

ಮೂಲಂಗಿ;15–20

ಬೆಂಡೆಕಾಯಿ;30–40

ಬದನೆಕಾಯಿ;30–40

ಎಲೆಕೋಸು;15–20

ಹೂಕೋಸು(1ಕ್ಕೆ);10–15

ತೊಂಡೆಕಾಯಿ;30–40

ಹಾಗಲಕಾಯಿ;40–50

ನಗ್ಗೆಕಾಯಿ;30–40

ಮೆಣಸಿನಕಾಯಿ;50–60

ಕ್ಯಾಪ್ಸಿಕಂ;40–50

ಶುಂಠಿ;100–120

ಸೌತೆಕಾಯಿ 1ಕ್ಕೆ;4–5

ನಿಂಬೆಹಣ್ಣು 1ಕ್ಕೆ;2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.