ತುಮಕೂರು: ಗುಣಮಟ್ಟದ ಹುಣಸೆ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿದ್ದು ಸೋಮವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಹುಣಸೆ ಹಣ್ಣು ₹26 ಸಾವಿರಕ್ಕೆ ಮಾರಾಟವಾಗಿದೆ.

ಕೊರಟಗೆರೆ ತಾಲ್ಲೂಕು ನೇಗಲಾಳ ಗ್ರಾಮದ ಜಯಣ್ಣ ಅವರು ಮಾರುಕಟ್ಟೆಗೆ ತಂದಿದ್ದ 70 ಕೆ.ಜಿ ಹುಣಸೆ ಹಣ್ಣು ಕ್ವಿಂಟಲ್‌ಗೆ ₹26 ಸಾವಿರ ದರದಲ್ಲಿ ಮಾರಾಟವಾಗಿದೆ. ಈ ಬಾರಿ ಇದುವರೆಗೆ ಹುಣಸೆಗೆ ಸಿಕ್ಕ ಹೆಚ್ಚು ಬೆಲೆ ಇದಾಗಿದೆ.

ಈ ಬಾರಿ ಗುಣಮಟ್ಟದ ಹಣ್ಣಿಗೆ ಒಳ್ಳೆಯ ಬೆಲೆ ಬಂದಿದೆ. ವ್ಯಾಪಾರಿಗಳು ಗುಣಮಟ್ಟದ ಹಣ್ಣು ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಗುಣಮಟ್ಟವಿದ್ದರೆ ಉತ್ತಮ ಬೆಲೆ ಸಿಗಲಿದೆ ಎಂದು ವರ್ತಕರು ಹೇಳುತ್ತಿದ್ದಾರೆ.

ಮಾರುಕಟ್ಟೆಗೆ ಸೋಮವಾರ 70 ಟನ್ ಹಣ್ಣು ಬಂದಿತ್ತು. ಕಡಿಮೆ ಗುಣಮಟ್ಟದ ಹಣ್ಣು ಕ್ವಿಂಟಲ್ ₹9,000ದಿಂದ ₹12,500ರ ವರೆಗೆ ಮಾರಾಟವಾಗಿದೆ. ಈವರೆಗೆ ಉತ್ತಮ ಗುಣಮಟ್ಟದ ಹಣ್ಣು ಕ್ವಿಂಟಲ್‌ಗೆ ₹13,000ದಿಂದ, ₹23,500ರವರೆಗೂ ಬೆಲೆ ಸಿಕ್ಕಿದೆ.

ಕಳೆದ ಮೂರು ವಾರದಿಂದ ಹಣ್ಣು ಮಾರುಕಟ್ಟೆಗೆ ಬರಲು ಆರಂಭಿಸಿದೆ. ಈಗ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಫೆಬ್ರುವರಿ ಕೊನೆ ಅಥವಾ ಮಾರ್ಚ್ ವೇಳೆಗೆ ಆವಕದಲ್ಲಿ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.