ತುರುವೇಕೆರೆ: ರೈಲು ನಿಲ್ದಾಣದಲ್ಲಿ ರೈಲು ಹತ್ತುತಿದ್ದ ಪ್ರಯಾಣಿಕನ ಜೇಬಿನಿಂದ ಮೊಬೈಲ್ ಕಳ್ಳತನಕ್ಕೆ ಯತ್ನಿಸುತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲ್ಲೂಕಿನ ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ನಡೆದಿದೆ.

ಛತ್ತೀಸಗಡದ ಚಿಂದಿ ಗ್ರಾಮದ ಪುರುಷೋತ್ತಮ್ ಸಾಬ್ ಬಂಧಿತ. ಭಾನುವಾರ ಸಂಜೆ ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ರೈಲು ಹತ್ತಲು ಮುಂದಾಗಿದ್ದರು. ರೈಲು ಮೊದಲೇ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಈ ಸನ್ನಿವೇಶವನ್ನು ಬಳಿಸಿಕೊಂಡ ಪುರುಷೋತ್ತಮ್ ರೈಲು ಹತ್ತುವ ಪ್ರಯಾಣಿಕನ ಕಿಸೆಗೆ ಕೈ ಹಾಕಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದು ದಂಡಿನಶಿವರ ಪೊಲೀಸರಿಗೆ ಒಪ್ಪಿಸಿದರು.

ದಂಡಿನಶಿವರ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.