ಹೆಬ್ರಿ: ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆಯಲು ರಿಕ್ಷಾ ಚಾಲಕರು ಕಡ್ಡಾಯವಾಗಿ ಬ್ಯಾಡ್ಜ್ ಹೊಂದಿರಬೇಕು. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಸಮಗ್ರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ನಿರೀಕ್ಷಕ ಕಮಲ್ ಷಾ ಅಲ್ತಾಫ್ ಅಹಮದ್ ಹೇಳಿದರು.

ಅವರು ಗುರುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ತಾಲ್ಲೂಕು ರಿಕ್ಷಾ ಚಾಲಕ ಮಾಲಕ ಸಂಘದ ಸಹಕಾರದಲ್ಲಿ ನಡೆದ ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ, ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಕ್ಷೆಮಾಭಿವೃದ್ಧಿ ಮಂಡಳಿಯ ಮಾಹಿತಿ ಕಾರ್ಯಗಾರ ಮತ್ತು ನೋಂದಣಿ ಕಾರ್ಯ, ಪ್ಯಾರ್ ಮೀಟರ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕು ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಕನ್ಯಾನ ಲಕ್ಷ್ಮೀನಾರಾಯಣ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಉತ್ತಮ ಯೋಜನೆ, ಸೇವೆಗಳಿವೆ. ತಾಲ್ಲೂಕಿನ ಪ್ರತಿ ಆಟೊ ಚಾಲಕನಿಗೂ ಸೇವೆ ದೊರಕುವಂತಾಗಬೇಕು ಎಂದರು.

ಕಾರ್ಕಳ ತಾಲ್ಲೂಕು ಕಾರ್ಮಿಕ ನಿರೀಕ್ಷಕ ನವೀನ್ ಕುಮಾರ್ ಸತ್ಯ, ಮಾಪನ ವಿಭಾಗದ ಸ್ಮಿತಾ, ಹೆಬ್ರಿ ತಾಲ್ಲೂಕು ರಿಕ್ಷಾ ಚಾಲಕ ಮಾಲಕ ಸಂಘದ ಕಾನೂನು ಸಲಹೆಗಾರ ಭರತ್ ಕುಮಾರ್ ಶೆಟ್ಟಿ, ಅಧ್ಯಕ್ಷ ಪ್ರಭಾಕರ ಪೂಜಾರಿ, ಕಾರ್ಯದರ್ಶಿ ಶ್ರೀನಾಥ್ ಶೆಟ್ಟಿಗಾರ್ ಬೆಳಗುಂಡಿ, ಕೋಶಾಧಿಕಾರಿ ಸುಬ್ರಹ್ಮಣ್ಯ ದೇವಾಡಿಗ, ಶಿವರಾಮ ಶೆಟ್ಟಿಗಾರ್, ಪ್ರವೀಣ್ ಪೂಜಾರಿ, ಅರವಿಂದ ಪೂಜಾರಿ, ರಾಘವೇಂದ್ರ ಕುಲಾಲ್, ಜಯಕರ ಪೂಜಾರಿ, ವೆಂಕಟೇಶ ನಾಯ್ಕ್, ವಿಠಲ ಪೂಜಾರಿ, ನಾಗರಾಜ ಶೆಟ್ಟಿಗಾರ್, ನಿತೀಶ್ ಪೂಜಾರಿ, ಉದಯ ಶೆಟ್ಟಿ ಇದ್ದರು. ಪ್ರಭಾಕರ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ರಮೇಶ್ ನಾಯ್ಕ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.