ಬ್ರಹ್ಮಾವರ: ಕೋಟದ ಮೆಸ್ಕಾಂ ಉಪವಿಭಾಗದ ಜನಸಂಪರ್ಕ ಸಭೆ ಸೋಮವಾರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ, ಸಾಸ್ತಾನ ಮೆಸ್ಕಾಂ ಶಾಖಾ ಕಛೇರಿಯಲ್ಲಿ ಸಾಕಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈರ್ವರು ಸುಪರ್ವೈಸರ್ಗಳನ್ನು ಬೇರೆಡೆ ವರ್ಗಾಯಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು. ‘ಸಾಕಷ್ಟು ವರ್ಷಗಳಿಂದ ಸಾಸ್ತಾನ ಶಾಖಾ ಕಛೇರಿಯಲ್ಲಿ ಕಾರ್ಯನಿರ್ವಹಿಸಿ ಮೆಸ್ಕಾಂ ಕಾರ್ಯಗಳನ್ನು ತಮ್ಮ ಖಾಸಗಿ ಕಾರ್ಯಗಳಾಗಿ ಪರಿವರ್ತಿಸಿಕೊಂಡು ಬಳಕೆದಾರರಿಗೆ ಸಮಸ್ಯೆ ತಂದಿಡುತ್ತಿದ್ದಾರೆ. ವಸೂಲಿ ಮಾಡುವರನ್ನು ಬೇರೆಡೆ ವರ್ಗಾಯಿಸಿ, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪಾಂಡೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಪ್ರತಾಪ ಶೆಟ್ಟಿ ಸಾಸ್ತಾನ, ಐರೋಡಿ ವಿಠ್ಠಲ ಪೂಜಾರಿ, ಸುರೇಶ ಕುಂದರ್ ಮತ್ತಿತರರು ಧ್ವನಿಗೂಡಿಸಿ ಈ ಬಗ್ಗೆ ಈಗಲೇ ನಿರ್ಧಾರ ಪ್ರಕಟಿಸಲು ಪಟ್ಟು ಹಿಡಿದರು. ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ನರಸಿಂಹ ಪಂಡಿತ್, 15 ದಿನಗಳ ಕಾಲಾವಕಾಶದಲ್ಲಿ ಬೇರೆಡೆ ವರ್ಗಾಯಿಸುವ ಪ್ರಯತ್ನ ಮಾಡುತ್ತೇವೆ ಎಂದು ಉತ್ತರಿಸಿದರು.

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕರೆಯ ಭಾಗದಲ್ಲಿ ದಶಕಗಳ ಹಿಂದೆ ಅಳವಡಿಸಲಾದ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ವಾರ್ಡ್ ಸದಸ್ಯ ರವೀಂದ್ರ ತಿಂಗಳಾಯ, ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಮನವಿ ನೀಡಿದರು. ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ ಕುಮಾರ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರತಾಪ ಚಂದ್ರ, ಸಹಾಯಕ ಎಂಜಿನಿಯರ್ ಶ್ರೀಕಾಂತ್, ಕೋಟ ಶಾಖಾಧಿಕಾರಿ ಪ್ರಶಾಂತ್ ಶೆಟ್ಟಿ, ಸಾಸ್ತಾನದ ಮಹೇಶ್, ಶಿರಿಯಾರದ ವೈಭವ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.