ಉಡುಪಿ: ಶಕ್ತಿಯ ಆರಾಧನೆಯ ಶರನ್ನವರಾತ್ರಿ ಆರಂಭವಾಯಿತೆಂದರೆ ನಾಡೆಲ್ಲಾ ಹಬ್ಬದ ವಾತಾವರಣ. ಎಲ್ಲೆಲ್ಲೂ ಸಂಭ್ರಮ, ಸಡಗರ. ದೇವಿಯ ದೇವಾಲಯಗಳಿಗೆ ಹರಿದು ಬರುವ ಭಕ್ತ ಸಾಗರ.

ಜಿಲ್ಲೆಯ ದೇವಾಲಯಗಳಲ್ಲಿ ನವರಾತ್ರಿಯ ವೇಳೆ ಪ್ರತಿ ವರ್ಷವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರುತ್ತವೆ. ಜಗನ್ಮಾತೆಯನ್ನು ಶಕ್ತಿಯ ವಿವಿಧ ಸ್ವರೂಪಗಳಲ್ಲಿ ಆರಾಧಿಸಲಾಗುತ್ತದೆ. ಜಿಲ್ಲೆಯಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೇವಾಲಯಗಳಿದ್ದು, ವಿವಿಧ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ನವರಾತ್ರಿ ಉತ್ಸವ ಆರಂಭವಾಗುತ್ತಿದ್ದಂತೆ ದೇವಿ ದೇವಾಲಯಗಳನ್ನು ವಿದ್ಯುತ್ ದೀಪ, ತಳಿರು, ತೋರಣಗಳಿಂದ ಅಲಂಕರಿಸಲಾಗುತ್ತದೆ. ಪ್ರಮುಖ ದೇವಾಲಯಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ, ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಮೂಲಕ ಭಕ್ತರಿಗೆ ಮನರಂಜನೆ ನೀಡಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲೇ ಹಲವೆಡೆ ಕದಿರು ಕಟ್ಟುವ ಹಬ್ಬವನ್ನೂ ಆಚರಿಸಲಾಗುತ್ತದೆ. ಇದೊಂದು ಕೃಷಿ ಪ್ರಧಾನವಾದ ಸಂಪ್ರದಾಯವಾಗಿದೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ, ಕಡಿಯಾಳಿಯ ಮಹಿಷಮರ್ದಿನಿ ದೇಗುಲ, ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ, ಅಂಬಾಗಿಲು ದುರ್ಗಾಪರಮೇಶ್ವರಿ, ಮಣಿಪಾಲದ ದುರ್ಗಾಂಬ ದೇವಾಲಯ ಹಾಗೂ ದೊಡ್ಡಣಗುಡ್ಡೆ ಆದಿಶಕ್ತಿ ಕ್ಷೇತ್ರಗಳಲ್ಲಿ ನವರಾತ್ರಿಯ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಹಬ್ಬದ ಅಂಗವಾಗಿ ಪ್ರತಿದಿನ ಕುಂಕುಮಾರ್ಚನೆ, ಮಹಾಪೂಜೆ, ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ.

ಹಿರಿಯಡಕದಲ್ಲಿ ಶರನ್ನವರಾತ್ರಿ

ಹಿರಿಯಡಕ: ಹಿರಿಯಡಕದ ಮಹತೋಭಾರ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಅ.3ರಿಂದ ಮೊದಲ್ಗೊಂಡು ಅ.12ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಕಾರ್ಯಕ್ರಮದ ಅಂಗವಾಗಿ ‘ತ್ರಿಕಾಲ ಶ್ರೀಚಕ್ರಾರಾಧನೆ’ ಚಂಡಿಕಾಯಾಗ ನಡೆಯಲಿದ್ದು, ವಿಜಯದಶಮಿಯಂದು ಸಾರ್ವಜನಿಕ ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ, ಶಮೀಪೂಜೆ, ಪೌಜು ಉತ್ಸವ ನಡೆಯಲಿದೆ.

ಪೂರಕ ಮಾಹಿತಿ: ವಾಸುದೇವ್ ಭಟ್, ಶೇಷಗಿರಿ ಭಟ್, ಕೆ.ಸಿ. ರಾಜೇಶ್, ಹಮೀದ್ ಪಡುಬಿದ್ರಿ, ರಾಘವೇಂದ್ರ ಹಿರಿಯಡ್ಕ, ವಿಶ್ವನಾಥ ಆಚಾರ್ಯ

Cut-off box - ವೈಭವದ ಉಡುಪಿ ಉಚ್ಚಿಲ ದಸರಾ ಪಡುಬಿದ್ರಿ: ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 3 ವರ್ಷಗಳಿಂದ ನವರಾತ್ರಿ ಉತ್ಸವದ ಪ್ರಯುಕ್ತ ‘ಉಡುಪಿ ಉಚ್ಚಿಲ ದಸರಾ’ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಈ ದೇವಸ್ಥಾನ 3 ವರ್ಷಗಳ ಹಿಂದೆ ನವೀಕರಣಗೊಂಡು ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ರಾಷ್ಟ್ರ ಮಟ್ಟದಿಂದ ಭಕ್ತರನ್ನು ಆಕರ್ಷಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಕ್ತರ ಸಹಯೋಗದೊಂದಿಗೆ ಈ ಬಾರಿ ಉಡುಪಿ ಉಚ್ಚಿಲ ದಸರಾ ನಡೆಯುತ್ತಿದೆ. ಆಕರ್ಷಕವಾಗಿ ನಿರ್ಮಿಸಿರುವ ಮಂಟಪದಲ್ಲಿ ನವದುರ್ಗೆಯರು ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಾಶ್ತ್ರೋಕ್ತವಾಗಿ ಪೂಜಿಸಲಾಗುತ್ತಿದೆ. ಶರನ್ನವರಾತ್ರಿ: ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿವರ್ಷ ಶರನ್ನವರಾತ್ರಿ ಮಹೋತ್ಸವ ನಡೆಯುತ್ತದೆ. ಕಾಪು ಸಾವಿರ ಸೀಮೆಯ ಒಡತಿ ಹೊಸ ಮಾರಿಗುಡಿಯ ದೇವಿ ಕಾಪು ಮಾರಿಯಮ್ಮ ಉಚ್ಚಂಗಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನ ಸಜ್ಜುಗೊಳ್ಳುತ್ತಿದ್ದು ದೇಶ ವಿದೇಶಗಳಲ್ಲಿ ಭಕ್ತರನ್ನು ಸೆಳೆಯುತ್ತಿದೆ.

ಕೊಲ್ಲೂರಿನಲ್ಲಿ ನವರಾತ್ರಿ ಸಂಭ್ರಮ

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಮಹಾನವರಾತ್ರಿ ಉತ್ಸವದ ಆಚರಣೆಗಳು ಕಳೆಗಟ್ಟಿದ್ದು ದೇಶ ಹಾಗೂ ಹೊರ ದೇಶಗಳಿಂದ ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅ.3ರಂದು ಬೆಳಿಗ್ಗೆ ನಾಂದಿ ಪೂಜೆಯೊಂದಿಗೆ ಆರಂಭವಾದ ನವರಾತ್ರಿ ಉತ್ಸವ ಅ.12 ವಿಜಯದಶಮಿವರೆಗೂ ಮುಂದುವರೆಯಲಿದೆ. ಅ.11ರಂದು ಬೆಳಿಗ್ಗೆ 11.30ಕ್ಕೆ ಚಂಡಿಕಾ ಯಾಗದ ಪೂರ್ಣಾಹುತಿ ನಡೆಯಲಿದೆ. ಅ.12 ರಂದು ಮುಂಜಾನೆಯಿಂದಲೇ ವಿದ್ಯಾರಂಭ ನವನ್ನಾಪ್ರಾಶನ ವಿಜಯ ದಶಮಿಯ ವಿಜಯೋತ್ಸವ ನಡೆಯಲಿದೆ. ನವರಾತ್ರಿ ಉತ್ಸವದ ದಿನಗಳಲ್ಲಿ ಪ್ರತಿದಿನ ನಡೆಯುವ ಕಟ್ಟು ಕಟ್ಟಳೆ ಸೇವೆಗಳು ಜೊತೆಯಲ್ಲಿ ನವರಾತ್ರಿಯ ವಿಶೇಷ ಸೇವೆಗಳು ನಡೆಯುತ್ತವೆ. ಮಧ್ಯಾಹ್ನ ಹಾಗೂ ರಾತ್ರಿ ಸಾವಿರಾರು ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿದಿನ ಸಂಜೆ ದೇಶದ ವಿವಿಧ ಭಾಗಗಳಿಂದ ಬಂದಿರುವ ಕಲಾವಿದರಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನವರಾತ್ರಿ ಉತ್ಸವದ 9ನೇ ರಾತ್ರಿ ನಡೆಯುವ ಹೂವಿನ ಅಲಂಕೃತ ರಥೋತ್ಸವದ ವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕಾಯುತ್ತಿರುತ್ತಾರೆ. ರಥಾವರೋಣವಾಗಿ ಶ್ರೀದೇವಿ ಮರಳಿ ಗರ್ಭಗುಡಿ ಪ್ರವೇಶಿಸುವ ಮೊದಲೇ ರಥದ ಅಲಂಕಾರಕ್ಕೆ ಹಾಕಿರುವ ಬಣ್ಣ ಬಣ್ಣದ ಹೂವುಗಳನ್ನು ಭಕ್ತರು ಕಿತ್ತುಕೊಳ್ಳುವ ಅಪರೂಪದ ದೃಶ್ಯಗಳಿಗೆ ದೇವಸ್ಥಾನದ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.

ನೀಲಾವರ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಾವರ: ತಾಲ್ಲೂಕಿನ ನೀಲಾವರ ಮಹತೋಭಾರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿದಿನ ದುರ್ಗಾಹೋಮ ನವರಾತ್ರಿ ಉತ್ಸವ ನಡೆಯುತ್ತಿದೆ. ವಿಜಯದಶಮಿಯಂದು ಚಂಡಿಕಾ ಹೋಮ ಸಂಜೆ ಸಾಮೂಹಿಕ ದೀಪ ನಮಸ್ಕಾರ ನಡೆಯಲಿದೆ. ಬಾರ್ಕೂರು ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಪ್ರತಿದಿನ ಸಾಮೂಹಿಕ ಚಂಡಿಕಾಹೋಮ ನಡೆಯುತ್ತಿದೆ. ನವರಾತ್ರಿ ಸಮಯದಲ್ಲಿ ಪ್ರತಿದಿನವೂ ದೇವರಿಗೆ ವಿಭಿನ್ನ ಅಲಂಕಾರ ಮಾಡಲಾಗುತ್ತಿದೆ. ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು ಸಾಮೂಹಿಕ ಚಂಡಿಕಾ ಹೋಮ ಹಾಗೂ ಪ್ರತಿ ದಿನ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ಕುಣಿತ ಭಜನೆ ನಡೆಯುತ್ತಿದೆ. ಮಂದಾರ್ತಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ ನಡೆಯುತ್ತಿದೆ. ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ಚಂಡಿಕಾ ಸಪ್ತಶತಿ ಪಾರಾಯಣ ದುರ್ಗಾಹೋಮಗಳು ಸಕಲ ವೈದಿಕ ಮತ್ತು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನ ಬೈಂದೂರು: ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲಿ ಪ್ರಾಮುಖ್ಯತೆ ಪಡೆದ ಉಪ್ಪುಂದ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಅರಬ್ಬಿ ಸಮುದ್ರ ಹಾಗೂ ಸುಮನಾವತಿ ನದಿಯ ನಡುವಿನ ಭೂ ಪ್ರದೇಶದಲ್ಲಿ ನೆಲೆಗೊಂಡಿರುವ ಶಕ್ತಿ ದೇವತೆ ದುರ್ಗಾಪರಮೇಶ್ವರಿ ಅಮ್ಮನವರು. 8ನೇ ಶತಮಾನದಲ್ಲಿ ಆದಿಶಂಕರರು ಆಗಮ ಶಾಸ್ತ್ರದ ಆಧಾರದಂತೆ ಶ್ರೀಚಕ್ರದ ಮೇಲೆ ಲಿಂಗರೂಪದಲ್ಲಿ ಶಕ್ತಿ ದೇವತೆಯಾದ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವಿದೆ. ದೇವಳದ ಈಶಾನ್ಯ ದಿಕ್ಕಿನಲ್ಲಿ ಅಗಸ್ತ್ಯತೀರ್ಥ ಹಾಗೂ ತೆಂಕು ದಿಕ್ಕಿನಲ್ಲಿ ಮಾತಂಗತೀರ್ಥ ಗರ್ಭಗುಡಿ ಮುಖಮಂಟಪ ತೀರ್ಥಮಂಟಪವಿದೆ.

ಕಾರ್ಕಳದಲ್ಲಿ ನವರಾತ್ರಿ ಮಹೋತ್ಸವ ಕಾರ್ಕಳ: ತಾಲ್ಲೂಕಿನ ಪ್ರಸಿದ್ಧ ದೇವೀ ಕ್ಷೇತ್ರವೆನಿಸಿದ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ವಿಶೇಷವಾಗಿ ಆಚರಿಸಲಾಗುತ್ತಿದೆ. ದೇವಾಲಯದಲ್ಲಿ ಅ.3ರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಆರಂಭಗೊಂಡಿದ್ದು 13ರ ತನಕ ನಡೆಯಲಿವೆ. ನವರಾತ್ರಿಯ 9 ದಿನಗಳಲ್ಲಿ ವಿಶೇಷ ಸೇವೆಯಾದ ಚಂಡಿಕಾ ಹೋಮ ಪ್ರಸಾದ ವಿತರಣೆ ಸಂಜೆ ರಂಗಪೂಜೆ ಪ್ರತಿದಿನ ಭಜಕರಿಗೆ ಸಂತರ್ಪಣೆ ಇರುತ್ತದೆ. 13ರಂದು ವಿಜಯದಶಮಿಯ ಚಂಡಿಕಾ ಹೋಮ ಭಂಡಾರದ ವತಿಯಿಂದ ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಸಂಜೆ ಶಾರದಾ ಶೋಭಾಯಾತ್ರೆ ಮೂರ್ತಿ ವಿಸರ್ಜನೆ ನಡೆಯಲಿದೆ. ಬೆಳ್ಮಣ್ ದುರ್ಗಾಪರಮೇಶ್ವರಿ: ತಾಲ್ಲೂಕಿನ ವನದೇವತೆ ಎಂಬ ಇತಿಹಾಸ ಪ್ರಸಿದ್ಧವಾದ ಬೆಳ್ಮಣ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.