ಉಡುಪಿ: ಮಲ್ಪೆಯ ತೊಟ್ಟಂನಲ್ಲಿ ಗುರುವಾರ ಗ್ರಾನೈಟ್ ಕಲ್ಲುಗಳನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಒಡಿಶಾ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಬಾಬುಲ್ಲ (35), ಭಾಸ್ಕರ್ (35) ಮೃತರು. ನಿರ್ಮಾಣ ಹಂತದ ಮನೆಗೆ ಅಳವಡಿಸಲು ಲಾರಿಯಲ್ಲಿ ಗ್ರಾನೈಟ್ ತುಂಬಿಕೊಂಡು ಬಂದಿದ್ದ ಕಾರ್ಮಿಕರು ಮನೆಯ ಬಳಿ ಕೆಳಗೆ ಇಳಿಸುವಾಗ ದುರ್ಘಟನೆ ಸಂಭವಿಸಿದೆ. ಗ್ರಾನೈಟ್ ದೇಹದ ಮೇಲೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಕಾರ್ಮಿಕರು ಮೃತಪಟ್ಟಿದ್ದಾರೆ.

ಪರಿಹಾರಕ್ಕೆ ಸಿಐಟಿಯು ಆಗ್ರಹ: ಒಡಿಶಾ ಮೂಲದ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವುದು ನೋವಿನ ವಿಚಾರ. ಕಾರ್ಮಿಕರು ಕೆಲಸ ಮಾಡುವ ಜಾಗಗಳಲ್ಲಿ ಸುರಕ್ಷತೆಗೆ ಒತ್ತು ನೀಡದಿರುವುದು ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕರ ಜೀವಗಳು ಬಲಿಯಾಗುತ್ತಿವೆ.

ಸುರಕ್ಷತೆ ನೀಡದೆ ಕೆಲಸ ಮಾಡಿಸಿಕೊಂಡು ಜೀವ ಹಾನಿಗೆ ಕಾರಣರಾಗಿರುವ ಗ್ರಾನೈಟ್ ಸಂಸ್ಥೆಯ ಮಾಲೀಕ ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕಾರ್ಮಿಕರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.