ಬೈಂದೂರು: ಸಾಂಪ್ರದಾಯಿಕ ಶಕ್ತಿಮೂಲಗಳು ನಶಿಸುತ್ತಿದ್ದು ಪರಿಸರಕ್ಕೂ ಹಾನಿಕಾರಕವಾಗಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಉಚಿತವಾಗಿ ಮತ್ತು ಮಾಲಿನ್ಯರಹಿತವಾಗಿ ಸಿಗುವ ಸೌರಶಕ್ತಿಯನ್ನು ಬಳಕೆ ಮಾಡಿಕೊಳ್ಳುವುದು ಕಾಲದ ಅಗತ್ಯ ಎಂದು ಕ್ಯಾನ್ ಫಿನ್ ಹೋಮ್ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ಪ್ರಶಾಂತ ಜೋಷಿ ಹೇಳಿದರು.

ಮರವಂತೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಗೆ ಸಂಸ್ಥೆಯ ಸಾಮಾಜಿಕ ಸೇವಾನಿಧಿಯಿಂದ ನೀಡಲಾದ ₹ 7 ಲಕ್ಷ ಮೌಲ್ಯದ ಸಂಪೂರ್ಣ ಸೌರಸಂಕೀರ್ಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯ ಎಲ್ಲ ವಿದ್ಯುತ್ ಅಗತ್ಯವನ್ನು ಈ ಸೌರಸಂಕೀರ್ಣ ಪೂರೈಸಲಿದ್ದು 8 ಸೌರದೀಪಗಳು ರಾತ್ರಿ ವೇಳೆ ಆವರಣ ಬೆಳಗಲಿವೆ. ಸೆಲ್ಕೊ ಸೋಲಾರ್ ಸಂಸ್ಥೆ ನಿರ್ವಹಣೆ ಮಾಡಲಿದೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಯು.ಭಾಸ್ಕರ ಮಯ್ಯ ಸ್ವಾಗತಿಸಿದರು. ಸೌರ ಸಂಕೀರ್ಣ ಕೊಡುಗೆಗೆ ಶ್ರಮಿಸಿದ ಸತೀಶ ಎಂ. ನಾಯಕ್, ಶಾಲಾ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಬಳೆಗಾರ್, ಸೆಲ್ಕೊ ಪ್ರಾದೇಶಿಕ ಪ್ರಬಂಧಕ ಶೇಖರ ಶೆಟ್ಟಿ, ಕುಂದಾಪುರ ಶಾಖಾಧಿಕಾರಿ ಮಂಜುನಾಥ್, ಪ್ರತಿಮಾ ಜೋಷಿ, ಚಂದ್ರ ಮಾಸ್ತರ್ ಇದ್ದರು. ಹಿತೇಶ ಶೆಟ್ಟಿ ವಂದಿಸಿದರು. ರಮೇಶ ನಾಯಕ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.