ಹೊನ್ನಾವರ: ತಾಲ್ಲೂಕಿನ ಯಲಗುಪ್ಪ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಡಿಕ್ಕಿ ಹೊಡೆದ ಕಾರಣ ಗಾಯಗೊಂಡಿದ್ದ ಕಡವೆ ಗುರುವಾರ ಮೃತಪಟ್ಟಿದೆ.

ಸುಮಾರು 6 ವರ್ಷದ ಗಂಡು ಕಡವೆ ಗಾಯಗೊಂಡು ಸಮೀಪದ ಕಿರು ಅರಣ್ಯಪ್ರದೇಶ ಸೇರಿಕೊಂಡಿತ್ತು. ಇದು ಬೇಟೆಗಾರರ ವಶವಾಗಬಹುದೆಂದು ಅರಣ್ಯ ಇಲಾಖೆ ಸಿಬ್ಬಂದಿ ಈ ಪ್ರದೇಶದಲ್ಲಿ ಕಾವಲಿಗಿದ್ದರು. ನಡೆಯಲಾಗದೆ ನಿತ್ರಾಣಗೊಂಡು, ಪೊದೆಯಲ್ಲಿ ಅವಿತಿದ್ದ ಕಡವೆಗೆ ವೈದ್ಯರು ಚಿಕಿತ್ಸೆ ನೀಡಿದ್ದರು.

‘ಕಡವೆ ಸೂಕ್ಷ್ಮಪ್ರಾಣಿಯಾಗಿದ್ದು, ಸ್ವಲ್ಪ ಗಾಯವಾದರೂ ಸಾಯುವ ಸಂಭವವಿರುತ್ತದೆ. ಮೃತ ಕಡವೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ’ ಎಂದು ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.