ಕಾರವಾರ:‘ಜಿಲ್ಲೆಯ ಕಡಲತೀರಗಳ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಹೊನ್ನಾವರದ ಇಕೊ ಬೀಚ್ಗೆ ‘ಬ್ಲೂಫ್ಲ್ಯಾಗ್’ ಕೆಲಸ ಶುರು ಮಾಡಲು ಆದೇಶಿಸಲಾಗಿದೆ. ಕಾಮಗಾರಿಗಾಗಿಕಡಲತೀರವನ್ನುಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಅದೇ ಮಾದರಿಯಲ್ಲಿ ಇತರೆಡೆಯೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

‘ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಮಾನದಂಡಗಳನ್ನು ಅನುಸರಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಕೊ ಬೀಚ್ಎರಡು ವರ್ಷಗಳಲ್ಲಿ ಅಭಿವೃದ್ಧಿಯಾಗುತ್ತದೆ. ನೀರಿನ ಗುಣಮಟ್ಟ, ಕುಡಿಯುವ ನೀರು, ಶೌಚಾಲಯ, ಸುರಕ್ಷತೆಯ ವ್ಯವಸ್ಥೆ ಮಾಡುವುದು ಅತಿ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಮುಂದೆ ಹೋದರೆ ಜಿಲ್ಲೆಯ ಎಲ್ಲ ಕಡಲತೀರಗಳನ್ನೂ ಅಭಿವೃದ್ಧಿ ಮಾಡಬಹುದು’ ಎಂದು ವಿವರಿಸಿದರು.

ಕಡಲತೀರ ಸ್ವಚ್ಛತೆಗೆ ಮತ್ತೆರಡು ಯಂತ್ರ:ಜಿಲ್ಲೆಯ ಕಡಲತೀರಗಳನ್ನುಸ್ವಚ್ಛಗೊಳಿಸಲು ಇನ್ನೆರಡುಯಂತ್ರಗಳು ಜಿಲ್ಲಾಡಳಿತಕ್ಕೆ ಮಂಜೂರಾಗುವ ಹಂತದಲ್ಲಿದೆ. ಅವುಗಳನ್ನು ಕಾರವಾರ ಹೊರತಾಗಿತಾಲ್ಲೂಕು ವ್ಯಾಪ್ತಿಯ ಮುಖ್ಯ ಬೀಚ್ಗಳಿಗೆ ಕೊಡಬಹುದು. ಕಾರವಾರದಲ್ಲಿ ಸಮಿತಿರಚಿಸಿ ಅಭಿವೃದ್ಧಿಪಡಿಸಿದ ರೀತಿಯಲ್ಲೇಇತರೆಡೆಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿಕಾರ್ಯ ನಿರ್ವಹಿಸಬಹುದು. ಇದರ ನೇತೃತ್ವದಲ್ಲಿ15 ದಿನಕ್ಕೊಮ್ಮೆ ಶುಚಿತ್ವದ ಪರಿಶೀಲನೆ ಮಾಡಬಹುದು ಎಂದರು.

‘ಗೋವಾದ ಕಡಲತೀರ ಯುವಕರಿಗೆ, ಮೋಜು ಮಸ್ತಿಗೆ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ, ನಮ್ಮಲ್ಲಿ ಇಡೀ ಕುಟುಂಬ ಜೊತೆಯಾಗಿ ಕಾಲ ಕಳೆಯುವ ರೀತಿಯ ವಾತಾವರಣ ಮೂಡಿಸುವ ಉದ್ದೇಶವಿದೆ. ಗೋವಾದಲ್ಲಿ ಸಾರ್ವಜನಿಕರ ಸಹಕಾರದಿಂದ ಪ್ರವಾಸಿಗರಿಗೆ ಸುರಕ್ಷತೆಯ ಭಾವನೆಯಿದೆ. ಅಂಥದ್ದೇಭಾವನೆಇಲ್ಲೂ ಇನ್ನಷ್ಟು ಬೆಳೆಯಬೇಕು. ಇದಕ್ಕೆ ಜನರ ಸಹಕಾರ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಖಾಸಗಿಯವರಿಗೂ ಅವಕಾಶ’

‘ಅಂಕೋಲಾ ಮತ್ತು ಕುಮಟಾದ ಕಡಲತೀರಗಳನ್ನೂ ಕಾರವಾರದ ಮಾದರಿಯಲ್ಲೇ ಮಾಡಬೇಕು ಎಂಬ ಚಿಂತನೆಯಿದೆ. ಒಂದುವೇಳೆ ಖಾಸಗಿಯವರು, ಮೀನುಗಾರರ ಸಮುದಾಯದವರು ಬಂಡವಾಳ ಹೂಡಿ ಅಭಿವೃದ್ಧಿ ಪಡಿಸುವುದಾದರೆ ಅವಕಾಶ ಕೊಡುವ ಚಿಂತನೆಯೂ ಇದೆ. ಮಂಗಳೂರಿನ ಕಡಲತೀರಗಳಲ್ಲಿಹೀಗೇ ಮಾಡಲಾಗಿದೆ.ಗೋವಾ ಗಡಿಯಲ್ಲಿರುವ ಕಡಲತೀರವನ್ನೂ ಈ ರೀತಿ ಅಭಿವೃದ್ಧಿ ಮಾಡುವ ಚಿಂತನೆಯಿದೆ. ಸಿಆರ್ಝೆಡ್ನಿಯಮದಲ್ಲಿ ಏನೆಲ್ಲ ಅವಕಾಶವಿದೆಯೋ ಅದನ್ನು ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.