ಯಂತ್ರ ಬಳಕೆಯಿಂದ ಹಲವು ಉಪಯೋಗ
ಅಡಿಕೆಗೆ ಉತ್ತಮ ದರ ಬಂದಾಗ ಸುಲಿಮಣೆ ಬಳಸಿ ಕೈಯಿಂದ ಸುಲಿದು ಒಂದೆರಡು ಕ್ವಿಂಟಲ್ ಚಾಲಿ ತಯಾರಿಸಲು ಕನಿಷ್ಠ ಒಂದು ವಾರ ಬೇಕಾಗುತ್ತದೆ. ಅಲ್ಲಿಯವರೆಗೆ ಅಡಿಕೆ ದರ ಕಡಿಮೆಯಾಗಿ ರೈತರಿಗೆ ಹಾನಿಯಾಗುತ್ತದೆ. ಯಂತ್ರ ಬಳಕೆ ಮಾಡಿದರೆ ಒಂದೇ ದಿನದಲ್ಲಿ ಐದಾರು ಕ್ವಿಂಟಲ್ ಚಾಲಿ ತಯಾರಿಸಬಹುದು. ಅದನ್ನು ಶುಚಿಗೊಳಿಸುವ ಕೆಲಸ ಕೂಡ ಒಂದೇ ದಿನದಲ್ಲಿ ಮುಗಿಯುತ್ತದೆ. ಕೂಲಿಯವರು ಬಂದು ವಾರಗಟ್ಟಲೆ ಅಡಿಕೆ ಸುಲಿಯುವುದರಿಂದ ಮನೆಯೆಲ್ಲ ಅಡಿಕೆ ದೂಳಿನಿಂದ ಗಲೀಜಾಗುತ್ತಿತ್ತು. ಕೂಲಿಯಾಳುಗಳಗೆ ನಿತ್ಯ ಊಟ ತಿಂಡಿ ಪೂರೈಸುವುದು ಎಲ್ಲ ಉಳಿಯುತ್ತದೆ. ಅಡಿಕೆ ಸುಲಿದ ಜಾಗಕ್ಕೆ ಬಂದು ಅಡಿಕೆ ಖರೀದಿ ಮಾಡುವ ವ್ಯಾಪಾರಿಗಳು ಇದ್ದಾರೆ’ ಎಂದು ರೈತ ನಾರಾಯಣ ನಾಯ್ಕ ಮೆಚ್ಚುಗೆ ವ್ಯಕ್ತ ಪಡಿಸಿದರು.