ಕಾರವಾರ: ಗೋವಾ ಪ್ರವೇಶಿಸುವ ಪ್ರತಿಯೊಬ್ಬರೂ 72 ಗಂಟೆಗಳ ಮೊದಲು ಪಡೆದ ಕೋವಿಡ್ ನೆಗೆಟಿವ್ (ಆರ್.ಟಿ.ಪಿ.ಸಿ.ಆರ್) ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಮೇ 12ರಿಂದ ಈ ಆದೇಶ ಜಾರಿಯಾಗಲಿದೆ.

ಈ ಸಂಬಂಧ ದಕ್ಷಿಣ ಗೋವಾ ಮತ್ತು ಉತ್ತರ ಗೋವಾ ಜಿಲ್ಲಾಧಿಕಾರಿಗಳು ಮಂಗಳವಾರ ಆದೇಶ ಪ್ರಕಟಿಸಿದ್ದಾರೆ. ಕಾರವಾರ ತಾಲ್ಲೂಕಿನ ಮಾಜಾಳಿ ಮತ್ತು ಜೊಯಿಡಾದ ಅನಮೋಡ ಮೂಲಕ ಗೋವಾಕ್ಕೆ ಹೋಗುವವರ ಮೇಲೆ ಈ ಆದೇಶದಿಂದ ಹೆಚ್ಚಿನ ಪರಿಣಾಮ ಬೀರಲಿದೆ.

ಇವರಿಗೆ ವಿನಾಯಿತಿ: ಅಲ್ಲಿ ಉದ್ಯೋಗದಲ್ಲಿರುವವರು ಉದ್ಯೋಗದಾತ ಸಂಸ್ಥೆಯು ನೀಡಿದ ಗುರುತಿನ ಚೀಟಿ ಅಥವಾ ಸಂಸ್ಥೆಯಿಂದ ನೀಡಿದ ಪತ್ರವನ್ನು ತೋರಿಸಿ ಹೋಗಬಹುದು. ಉಳಿದಂತೆ, ಗೋವಾ ನಿವಾಸಿಗಳು ತಮ್ಮ ವಾಸ್ತವ್ಯಕ್ಕೆ ಕುರಿತಾದ ದಾಖಲೆಗಳನ್ನು ತೋರಿಸಬೇಕು.

ವೈದ್ಯಕೀಯ ಕಾರಣಗಳಿಂದ ಗೋವಾಕ್ಕೆ ಭೇಟಿ ಕೊಡುವವರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. ಆಂಬುಲೆನ್ಸ್‌ನಲ್ಲಿ ರೋಗಿಗಳು ಬಂದರೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಗೋವಾ: ಆಮ್ಲಜನಕ ಕೊರತೆ, 26 ಕೋವಿಡ್ ರೋಗಿಗಳ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.