‘ಭೂ ಅಂತರ್ಗತ ಬಸಿಗಾಲುವೆ ನಿರ್ಮಾಣಕ್ಕೆ ತೋಟಗಾರಿಕಾ ಇಲಾಖೆಯಿಂದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಸಹಾಯ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ. ಒಂದು ಎಕರೆಗೆ ₹ 1.49 ಲಕ್ಷ ಆರ್ಥಿಕ ಸಹಾಯ ದೊರೆಯಲಿದೆ. ಬಸಿಗಾಲುವೆಗಳ ನಿರ್ಮಾಣದಿಂದ ತೋಟದಲ್ಲಿ ಮಧ್ಯಂತರ ಬೆಳೆಗಳನ್ನು ಬೆಳೆಯಲೂ ಅನುಕೂಲವಾಗಲಿದೆ. ಹೊಸದಾಗಿ ತೋಟವನ್ನು ನಿರ್ಮಿಸುವುದರ ಬದಲು ಇಂತಹ ಯೋಜನೆಗಳನ್ನು ಬಳಸಿ ಇರುವ ತೋಟದಲ್ಲಿಯೇ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಬಿ.ಎಸ್.