ಶಿರಸಿ: ‘ಕಾರ್ಯಕರ್ತರು ಮತ್ತು ಬೆಂಬಲಿಗರ ಒತ್ತಾಯದ ಮೇರೆಗೆ ನವೆಂಬರ್ 30ರಂದು ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುವೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತಮ್ಮ ಬೆಂಬಲಿಗರ ಜತೆ ಭೇಟಿಯಾದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೆಡಿಎಸ್ ಮೇಲೆ ಬೇಸರ ಇಲ್ಲ. ಆದರೆ ಹಳಿಯಾಳ ಕ್ಷೇತ್ರದ ನನ್ನ ಬಹುತೇಕ ಬೆಂಬಲಿಗರು ಬಿಜೆಪಿ ಪರ ಒಲವು ಹೊಂದಿದ್ದು, ಹಲವರು ಈಗಾಗಲೇ ಸೇರ್ಪಡೆಯು ಆಗಿದ್ದಾರೆ. ನಾನು ಪಕ್ಷ ಸೇರುವುದಕ್ಕೆ ಹಳಿಯಾಳ ಭಾಗದ ಮೂಲ ಬಿಜೆಪಿಯವರಿಂದ ಸಮ್ಮತಿಯೂ ಸಿಕ್ಕಿದೆ’ ಎಂದರು.

‘ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದೆ. ಈ ಹಿಂದೆ ಕಾಂಗ್ರೆಸ್ ತೊರೆದಾಗಲೇ, ಬಿಜೆಪಿ ಸೇರಬೇಕಿತ್ತು. ಆದರೆ ಕೆಲ ಕಾರಣಕ್ಕೆ ಜೆಡಿಎಸ್ ಸೇರಿದೆ. ಈಗ ಬಿಜೆಪಿ ಸೇರಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನಿಸುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.