ಗೋಕರ್ಣ: ಇಲ್ಲಿಯ ಮೇನ್ ಬೀಚ್‌ನಲ್ಲಿ ವಿದೇಶಿ ಪ್ರಜೆಯ ಶವ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮಂಗಳವಾರ ಸಂಜೆ ಸಮುದ್ರದಲ್ಲಿ ಈಜಾಡಲು ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಊಹಿಸಲಾಗಿದೆ.

ಯಾವ ದೇಶದ ಪ್ರಜೆ, ಎಷ್ಟು ದಿನದಿಂದ ಗೋಕರ್ಣದಲ್ಲಿದ್ದರು ಎಂಬಿತ್ಯಾದಿ ವಿವರಗಳು ತಿಳಿದು ಬರಬೇಕಾಗಿದೆ. ಪ್ರವಾಸಿ ನಿಜವಾಗಿಯೂ ಸಮುದ್ರದಲ್ಲಿ ಮುಳುಗಿ ಮೃತಪಟ್ಟರೋ ಅಥವಾ ಲಾಕ್‌ಡೌನ್ ಪರಿಣಾಮದಿಂದ ತಮ್ಮ ದೇಶಕ್ಕೆ ತಿರುಗಿ ಹೋಗಲು ಸಾಧ್ಯವಾಗದೇ ಕೈಯಲ್ಲಿದ್ದ ಹಣ ಖರ್ಚಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಯೋ ಎಂಬ ಬಗ್ಗೆಯೂ ತಿಳಿಯದಾಗಿದೆ.

ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತರು ವಿದೇಶಿ ಪ್ರಜೆಯಾದ ಕಾರಣ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.