ಕಂಪ್ಲಿ: ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕಿನ ರಾಮಸಾಗರ ಮತ್ತು ಉಪ್ಪಾರಹಳ್ಳಿ ಗ್ರಾಮಗಳಲ್ಲಿ ಗುರುವಾರ ಬೀದಿ ನಾಟಕ ಪ್ರದರ್ಶನ ನಡೆಯಿತು.

ಕಲಾವಿದರಾದ ಜಿ.ಎಂ.ವಿಜಯಕುಮಾರ್, ಭೀಮೇಶ್ ಹಾಗಲೂರು, ಆಸಿಫ್, ಸುಮಿತ್ರಾ, ಕಾವ್ಯ, ಸುಮಂಗಳ, ಶ್ರೀಕಾಂತ್, ಅರವಿಂದ, ನಾಗರಾಜ್ ಬಡಿಗೇರ್, ಅಂಬರೀಶ್ ಬೀದಿ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿ, ಜನರ ಮೆಚ್ಚುಗೆ ಗಳಿಸಿದರು.

ಆರಂಭದಲ್ಲಿ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಮುಖ್ಯಸ್ಥ ವೈ. ಮಂಜುನಾಥ ಮಾತನಾಡಿ, ಬಳ್ಳಾರಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸೂಚನೆಯಂತೆ ತಾಲ್ಲೂಕಿನ ಮೆಟ್ರಿ, ಕಣಿವೆ ತಮ್ಮಲಾಪುರ, ನೆಲ್ಲುಡಿ, ಮುದ್ದಾಪುರ, ದೇವಸಮುದ್ರ ಎಮ್ಮಿಗನೂರು, ದೇವಲಾಪುರ, ಗೋನಾಳು, ಹಂಪಾದೇವನಹಳ್ಳಿ, ಅರಳಿಹಳ್ಳಿ ತಾಂಡಾ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಜವುಕು, ಮತ್ತು ಮುದ್ದಾಪುರ ಗ್ರಾಮ ಸೇರಿದಂತೆ ವಿವಿಧೆಡೆ ಪ್ರಸ್ತುತ ಬೀದಿ ನಾಟಕ 20 ಪ್ರದರ್ಶನಗಳು ನಡೆಯಲಿವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.