ಹರಪನಹಳ್ಳಿ (ವಿಜಯನಗರ ಜಿಲ್ಲೆ) : ಪಟ್ಟಣದ ವಿವಿಧ ಬ್ಯಾಂಕ್ ಗಳಲ್ಲಿ ಹಣ ಬಿಡಿಸಿಕೊಂಡು ಬರುತ್ತಿದ್ದ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಮೂಲದ ಮೂವರು ಅಂತರರಾಜ್ಯ ಕಳ್ಳರನ್ನು ಸ್ಥಳೀಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವೆಂಕಟರಮಣ, ಕೊಂಡಯ್ಯ ಮತ್ತು ನೆಲ್ಲೂರು ಜಿಲ್ಲೆಯ ಎಂ.ಪ್ರಭುದಾಸ ಬಂಧಿತರು. ಅವರಿಂದ ₹ 9 ಲಕ್ಷ ನಗದು, 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬಂದು ಹಣವನ್ನು ಮೋಟಾರು ಸೈಕಲ್ಲಿನ ಬ್ಯಾಗ್ನಲ್ಲಿಲ್ಲಿಟ್ಟುಕೊಂಡು ಹೋಗುತ್ತಿದ್ದ ಗ್ರಾಹಕರನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು, ಸ್ವಲ್ಪ ದೂರ ಕ್ರಮಿಸಿದ ನಂತರ ಅವರ ಗಮನವನ್ನು ಬೇರೆಡೆ ಸೆಳೆದು, ಬೈಕ್ ಬ್ಯಾಗ್ ನಲ್ಲಿಟ್ಟಿದ್ದ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ 2022 ಅಕ್ಟೋಬರ್ ತಿಂಗಳಿನಿಂದ 2023ರ ಸಾಲಿನವರೆಗೆ ಪಟ್ಟಣದ 4 ಕಡೆಗೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹರಿಬಾಬು ತಿಳಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿದ್ದ ಡಿವೈಎಸ್ಪಿಗಳಾದ ಹಾಲಮೂರ್ತಿ ರಾವ್, ಮಾಲತೇಶ್ ಎಂ.ಕೂನ್ಬೇವ, ಸಿಪಿಐ ನಾಗರಾಜ್ ಎಂ.ಕಮ್ಮಾರ, ಪಿಎಸ್ಐ ಶಾಂತಮೂರ್ತಿ, ಕಾನ್ಸಟೇಬಲ್ ಗಳಾದ ರವಿ ದಾದಾಪುರ, ಆನಂದ, ಮನೋಹರ ಪಾಟೀಲ್, ವಾಸುದೇವನಾಯ್ಕ, ಕುಮಾರ ನಾಯ್ಕ ಒಳಗೊಂಡ ತಂಡದ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಬಿ.ಎಲ್. ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.